ಸೋಮವಾರಪೇಟೆ, ಸೆ. ೫: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕೈಲು ಮುಹೂರ್ತ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು.

ಕೃಷಿ ಚಟುವಟಿಕೆ ಮುಗಿಸಿ, ಮನೆಯಲ್ಲಿ ಇರುವ ಕೋವಿ, ಒಡಿಕತ್ತಿ ಸೇರಿದಂತೆ ಕೃಷಿಗೆ ಬಳಸುವ ಪರಿಕರಗಳನ್ನು ಪೂಜಿಸಿ ಸಂಭ್ರಮಿಸುವುದು ವಾಡಿಕೆ. ಬೆಳಿಗ್ಗೆ ಕುಟುಂಬಸ್ಥರು ತಮ್ಮ ಐನ್‌ಮನೆಯಲ್ಲಿ ಗುರುಕಾರೋಣರನ್ನು ಪೂಜಿಸಿ, ವಿವಿಧ ಭಕ್ಷö್ಯ ಭೋಜನದೊಂದಿಗೆ ಹಿರಿಯರಿಗೆ ಎಡೆ ಇಟ್ಟು ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿದರು.

ನಂತರ ಹಬ್ಬದ ಪ್ರಯುಕ್ತ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು.

ಗರ್ವಾಲೆಯಲ್ಲಿ: ತಾಲೂಕಿನ ಗರ್ವಾಲೆ ಗ್ರಾಮದ ಕೊತ್ತಮೊಟ್ಟೆ ಮಂದ್‌ನಲ್ಲಿ ಕೈಲ್‌ಮುಹೂರ್ತ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಬಹಳ ಹಿಂದಿನಿAದಲೂ ಆಚರಿಸಿಕೊಂಡು ಬರುತ್ತಿರುವ ಕೈಲು ಮುಹೂರ್ತ ವಿಶಿಷ್ಟ ಹಬ್ಬವಾಗಿದ್ದು, ಇದನ್ನು ಇಂದಿಗೂ ಮುಂದುವರೆಸಿಕೊAಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

ನಮ್ಮ ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸಿ ಮುಂದುವರೆಸಿಕೊAಡು ಹೋಗಬೇಕಾಗಿದೆ. ನಮ್ಮ ಪೂರ್ವಜರಿಂದ ಆಚರಿಸಿಕೊಂಡು ಬರುತ್ತಿರುವ ಹಬ್ಬ-ಆಚರಣೆಗಳನ್ನು ಕೈ ಬಿಡಬಾರದು ಎಂದರು.

ಈ ಸಂದರ್ಭ ತಾಚಮಂಡ ಈರಪ್ಪ, ಓಡಿಯಂಡ ಉತ್ತಪ್ಪ, ಆರುಡ ರಾಜಪ್ಪ, ಐಮುಡಿಯಂಡ ಮಾಚಯ್ಯ, ಗೀಜಿಗಂಡ ಲೋಕೇಶ್, ಕನ್ನಿಕಂಡ ಸುಭಾಷ್ ಮತ್ತಿತರರು ಇದ್ದರು. ಇದೇ ಸಂದರ್ಭ ಗ್ರಾಮಸ್ಥರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಗುಡ್ಡಗಾಡು ಓಟ, ಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.