ಮಡಿಕೇರಿ, ಸೆ. ೫: ಮಳೆಯ ಕೊರತೆಯಿಂದಾಗಿ ಸಮಸ್ಯೆ ಎದುರಿಸುವ ಅತಂಕದಲ್ಲಿರುವ ಜನತೆಗೆ ಇದೀಗ ಒಂದಷ್ಟು ಆಶಾಭಾವನೆ ಮೂಡಿಸುವ ರೀತಿಯಲ್ಲಿ ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಕಂಡುಬAದಿದೆ. ನಿನ್ನೆಯಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಎದುರಾಗುತ್ತಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆಗಳಲ್ಲಿ ಮಳೆಯಾಗಿದೆ. ಮಳೆಯ ತೀವ್ರತೆ ಇಲ್ಲವಾದರೂ ಕಾದ ನೆಲಕ್ಕೆ ತಂಪೆರೆಯುವAತೆ ಹಾಗೂ ಕೃಷಿ ಫಸಲುಗಳಿಗೆ ಒಂದಷ್ಟು ಪ್ರಯೋಜನಕಾರಿಯಾಗುವ ರೀತಿಯಲ್ಲಿ ಮಳೆಯಾಗುತ್ತಿರುವುದರಿಂದ ರೈತರಲ್ಲಿ ಒಂದಷ್ಟು ಆಶಾಭಾವನೆ ಮೂಡುವಂತಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಕೆಲದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮೂಲಗಳ ಪ್ರಕಾರ ಜಿಲ್ಲೆಯ ಶೇ.೪೦ರಷ್ಟು ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಇದೇ ರೀತಿ ಸಣ್ಣ ಪ್ರಮಾಣದಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ತಾ.೮ ಹಾಗೂ ೯ರಂದು ಒಂದಷ್ಟು ಹೆಚ್ಚು ಪ್ರಮಾಣದ ಮಳೆ ಬೀಳುವ ನಿರೀಕ್ಷೆ ಇರುವುದಾಗಿ ಹೇಳಲಾಗಿದೆ. ಈ ಎರಡು ದಿನಗಳಲ್ಲಿ ಜಿಲ್ಲೆಯ ಶೇ.೬೦ರಿಂದ ೭೦ ಭಾಗದಲ್ಲಿ ಮಳೆಯಾಗುವ

(ಮೊದಲ ಪುಟದಿಂದ) ಸಾಧ್ಯತೆಯಿದೆ ಎನ್ನಲಾಗಿದೆ. ಮಂಗಳವಾರದAದು ಜಿಲ್ಲಾ ಕೇಂದ್ರ ಮಡಿಕೇರಿ, ಸುಂಟಿಕೊಪ್ಪ, ಗೋಣಿಕೊಪ್ಪಲು, ಬಿಟ್ಟಂಗಾಲ, ವೀರಾಜಪೇಟೆ ಮತ್ತಿತರ ಭಾಗಗಳಲ್ಲಿ ಸುಮಾರು ೩೦ ಸೆಂಟ್‌ನಿAದ ಅರ್ಧ ಇಂಚುಗಳಷ್ಟು ಮಳೆಯಾಗಿರುವ ಕುರಿತು ವರದಿಯಾಗಿದೆ. ಪ್ರಸಕ್ತ ವರ್ಷ ಆರಂಭದಿAದಲೂ ಮುಂಗಾರು ಜಿಲ್ಲೆಯಲ್ಲಿ ಕ್ಷೀಣಗೊಂಡಿದೆ.ಕೆಲವು ದಿನಗಳು ಮಾತ್ರ ಒಂದಷ್ಟು ರಭಸದ ಮಳೆಯಾಗಿರುವುದನ್ನು ಹೊರತುಪಡಿಸಿದರೆ, ಮಳೆಗಾಲದಲ್ಲಿ ತೀವ್ರತೆ ಸೃಷ್ಟಿಸುತ್ತಿದ್ದ ಆರ್ದ್ರಾ, ಪುನರ್ವಸು, ಆಶ್ಲೇಷಾ ಮಳೆ ನಕ್ಷತ್ರದಲ್ಲೂ ನಿರೀಕ್ಷಿತ ಮಳೆಯಾಗಿಲ್ಲ. ಇದೀಗ ಮಖಾ ಮಳೆ ನಕ್ಷತ್ರವೂ ಮುಗಿದಿದ್ದು, ಆ.೩೧ರಿಂದ ಹುಬ್ಬಾ ಮಳೆ ನಕ್ಷತ್ರ ನಡೆಯುತ್ತಿದೆ. ಜೂನ್‌ನಿಂದ ಆಗಸ್ಟ್ ತನಕದ ಮುಂಗಾರು ಅವಧಿಯ ವಾಡಿಕೆ ಮಳೆಯಾಗದಿರುವುದರಿಂದ ಇದೀಗ ಈ ಅವಧಿಯಲ್ಲಿನ ಬದಲಾವಣೆಯ ನಿರೀಕ್ಷೆಯಲ್ಲಿ ಜನತೆ ಕಾಯುವಂತಾಗಿದೆ.