ಕಿಶೋರ್ ಕುಮಾರ್ ಶೆಟ್ಟಿ

ವೀರಾಜಪೇಟೆ, ಸೆ. ೪: ವೀರಾಜಪೇಟೆಯ ನಂ. ೨೮೩ ನೇ ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತ ಬ್ಯಾಂಕ್ ಸೊಸೈಟಿಯಲ್ಲಿ ನಡೆದ ಅಕ್ರಮಗಳ ತನಿಖೆಗಾಗಿ ಕೆ.ಪಿ.ಐ.ಡಿ.ಎಫ್.ಇ. ಕಾಯಿದೆಯಂತೆ ಇದೀಗ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿ ತನಿಖಾಧಿಕಾರಿಗಳನ್ನು ನೇಮಿಸುವಂತೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಕಚೇರಿ ಆದೇಶ ಹೊರಡಿಸಿದೆ.

ವೀರಾಜಪೇಟೆ ನಗರದ ಗಡಿಯಾರ ಕಂಬದ ಬಳಿಯ ವೀರಾಜಪೇಟೆ ನಂ ೨೮೩ನೇ ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತ. ಸಹಕಾರ ಸಂಘದಲ್ಲಿ ನಡೆದ ಅಕ್ರಮಗಳ ಕುರಿತಾಗಿ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್‌ನ ನಿರ್ದೇಶಕರು ಮತ್ತು ಠೇವಣಿದಾರರು ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡು ಕಲಂ ೦೯ ಕೆ.ಪಿ.ಐ.ಡಿ.ಎಫ್.ಇ ಕಾಯಿದೆಯನ್ನು ಅಳವಡಿಸಿಕೊಂಡು ತನಿಖೆಯು ಪ್ರಗತಿಯಲ್ಲಿದೆ. ಪ್ರಸ್ತುತ ಪ್ರಕರಣದಲ್ಲಿ ಕೆ.ಪಿ.ಐ.ಡಿ.ಎಫ್.ಇ ನಂತೆ ಬ್ಯಾಂಕ್ ವಿರುದ್ಧ ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರವನ್ನು ನೇಮಿಸಲು ಇಲಾಖೆಯು ಸರ್ಕಾರವನ್ನು ಕೋರಿಕೊಂಡಿತ್ತು. ಇಲಾಖೆಯ ಮನವಿಯ ಮೇರೆಗೆ ಕಂದಾಯ ಇಲಾಖೆಯು ಸಕ್ಷಮ ಪ್ರಾಧಿಕಾರದ ತನಿಖೆ ಅಧಿಕಾರಿಗಳನ್ನಾಗಿ ಕೊಡಗು ಜಿಲ್ಲಾ ಉಪವಿಭಾಗಧಿಕಾರಿಯನ್ನು ನೇಮಕ ಮಾಡಿದೆ.

ಸುಮಾರು ೯೦ ವರ್ಷಗಳು ಸಂದಿರುವ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಆಡಳಿತ ಮತ್ತು ಸೇವೆಯನ್ನು ಒದಗಿಸುತಿತ್ತು. ೦೧-೧೦-೧೯೯೫ ರಿಂದ ೩೦-೦೯-೨೦೧೨ ರವರೆಗೆ ಎಸ್.ಹೆಚ್. ಮೈನುದ್ದೀನ್ ಹಾಗೂ ದಿನಾಂಕ ೦೧-೧೦-೨೦೧೨ ರಿಂದ ೩೧-೦೩-೨೦೨೦ ರವರೆÀಗೆ ಮೊಹಮ್ಮದ್ ಸೋಹೆಬ್ ಅವರು ಅಧ್ಯಕ್ಷರುಗಳಾಗಿ ಮತ್ತು ಇ. ಮುಕ್ತಾರ್ ಅಹಮ್ಮದ್ ಅವರು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತಿದ್ದ ಅವಧಿಯಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ಹಣವನ್ನು ನೀಡುವುದಾಗಿ ನಂಬಿಸಿ ಗ್ರಾಹಕರಿಂದ, ಠೇವಣಿದಾರರಿಂದ ವಿವಿಧ ಸ್ಕೀಂಗಳಲ್ಲಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ಸೊಸೈಟಿ ಹೊಂದಿರುವ ಬ್ಯಾಂಕ್ ಖಾತೆಗಳ ದೃಢೀಕರಣ ಪತ್ರಗಳನ್ನು ನಕಲು ಮಾಡಿ ಸುಮಾರು ಐದುವರೆ ಕೋಟಿ ರೂ ಹಣವನ್ನು ಮೋಸವಾಗಿದೆ ಎಂದು ಆರೋಪಿಸಲಾಗಿತ್ತು.

ಠೇವಣಿದಾರರಿಗೆ ಮತ್ತು ಬ್ಯಾಂಕ್‌ನ ಗ್ರಾಹಕರಿಗೆ ಹಣವನ್ನು ಹಿಂದಿರುಗಿಸುವAತೆ ಬ್ಯಾಂಕ್‌ನ ನಿರ್ದೇಶಕÀ ಡಿ.ಐ. ಎಜಾಜ್ ಅಹಮ್ಮದ್ ಅವರು ೦೪-೦೫-೨೦೨೨ ರಂದು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕರ ವಿರುದ್ಧ ಈ ಮಧ್ಯೆ ಕಾನೂನು ಹೋರಾಟಕ್ಕೆ ಸಜ್ಜಾದ ಠೇವಣಿದಾರರು ರಾಜ್ಯ ಗೃಹ ಖಾತೆಗೆ ದೂರು ನೀಡಿದ್ದರು. ಗೃಹ ಇಲಾಖೆಯು ಅವ್ಯವಹಾರದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಸಿ.ಐ.ಡಿ ಘಟಕಕ್ಕೆ ಆದೇಶ ನೀಡಿತ್ತು. ಸರ್ಕಾರದ ಆದೇಶದಂತೆ ಪ್ರಕರಣ ತನಿಖೆಯನ್ನು ಸಿ.ಐ.ಡಿ ಘಟಕದ ಸಿ.ಟಿ.ಆರ್. ವಿಭಾಗಕ್ಕೆ ವರ್ಗಾಹಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿಗಳಾಗಿ ನೇಮಿಸಲ್ಪಟ್ಟ ಡಿ.ವೈ.ಎಸ್ಪಿ ಶೀಹರ್ಷ ಎಸ್ ತನಿಖೆಯನ್ನು ಮುಂದುವರೆಸಿದರು. ಪ್ರಕರಣದ ಕಲಂ ೪೬೮, ೪೦೯ ಐ.ಪಿ.ಸಿ ಹಾಗೂ ಕಲಂ ೦೯ ಕೆ.ಪಿ.ಐ.ಡಿ.ಎಫ್.ಇ ಕಾಯ್ದೆ ೨೦೦೪ ರನ್ನು ಅಳವಡಿಸಿಕೊಂಡು ತನಿಖೆ ಮುಂದುವರೆಸಲು ವೀರಾಜಪೇಟೆ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯವು ಸಿ.ಐ.ಡಿ. ವಿಭಾಗಕ್ಕೆ ಅನುಮತಿಯನ್ನು ನೀಡಿತ್ತು.

ಕಲಂ ೦೯ ಕೆ.ಪಿ.ಐ.ಡಿ.ಎಫ್.ಇ ಕಾಯ್ದೆ ೨೦೦೪ ರಂತೆ ಪ್ರಕರಣದ ತನಿಖೆಗಾಗಿ ಸಕ್ಷಮ ಪ್ರಾಧಿಕಾರ ರಚನೆ ಮಾಡುವಂತೆ ಸಿ.ಐ.ಡಿ ವಿಭಾಗ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸರ್ಕಾರವು ಕ್ರಮ ಜರುಗಿಸದಿರುವುದರಿಂದ ಸಿ.ಐ.ಡಿ ಘಟಕವು ೦೭-೦೩-೨೦೨೩ ರಂದು ಮತ್ತೊಮ್ಮೆ ತನಿಖೆಯನ್ನು ಮುಂದುವರೆಸಲು ಸಕ್ಷಮ ಪ್ರಾಧಿಕಾರ ರಚನೆ ಮಾಡುವಂತೆ ಮನವಿ ಸಲ್ಲಿಸಿತು. ಇದೀಗ ಮನವಿಯನ್ನು ಪುರಸ್ಕರಿಸಿದ ಹಿನ್ನಲೆಯಲ್ಲಿ ರಾಜ್ಯ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಕೊಡಗು ಜಿಲ್ಲೆಯ ಉಪ ವಿಭಾಗಾಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರದ ತನಿಖಾಧಿಕಾರಿಗಳಾಗಿ ನೇಮಕ ಮಾಡಿರುವ ಕುರಿತಾಗಿ ಆದೇಶ ಮಾಡಿದೆ.