ಮಕ್ಕಳಿಗೆ ದೇವರು ತಂದೆ-ತಾಯಿಯನ್ನು ನೀಡಿದರೆ ಸಮಾಜವು ನೀಡುವ ತಾಯಿ-ತಂದೆ ಗುರುಗಳು. ಗುರುಗಳು ತಮಗಿರುವ ಜ್ಞಾನದಿಂದ ಪದ್ಯ, ಗದ್ಯ, ಸಾಹಿತ್ಯ ಪಂಪ, ರನ್ನ, ಶೇಕ್ಸ್ಪಿಯರ್‌ನಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿ ಉನ್ನತ ವ್ಯಕ್ತಿ ಗಳನ್ನಾಗಿ ತಯಾರು ಮಾಡು ತ್ತಾರೆ. ವಿಶ್ವವನ್ನು ಪರಿಚಯಿಸು ತ್ತಾರೆ.

ಗುರು ಶಿಷ್ಯರ ಬಾಂಧವ್ಯ ವಿಶೇಷವಾದುದು. ಉತ್ತಮ ಗುರು, ಶಿಷ್ಯರ ಬಗ್ಗೆ ಹೇಳುವುದಾ ದರೆ ವಿಶ್ವಕ್ಕೆ ಮಾರ್ಗದರ್ಶನ ನೀಡಿದ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಜೀವನ ಮುಂದೆ ಬರುತ್ತದೆ. ಜೀವನದಲ್ಲಿ ಸರಿಯಾದ ಗುರು ದೊರಕಿ ಬದುಕು ಉನ್ನತ ಮಟ್ಟ ತಲುಪಿದಾಗ ಗುರುವಿನ ಮಹತ್ವದ ಅರಿವಾಗುವುದು. ಅಂತಹ ಶಿಕ್ಷಕರ ದಿನದಂದು ಬದುಕಿಗೆ ದಾರಿ ತೋರಿದ ಗುರುವನ್ನು ನೆನೆಸಿಕೊಳ್ಳುವುದು ವಿದ್ಯಾರ್ಥಿಗಳು ಮಾತ್ರವಲ್ಲ ವಿದ್ಯೆ ಕಲಿತ ಪ್ರತಿಯೊಬ್ಬರು ಗುರುಗಳನ್ನು ನೆನೆಸಿಕೊಳ್ಳಲೇಬೇಕು.

ಮಾತು ಕೇಳದ ಅಡ್ಡ ದಾರಿ ಹಿಡಿದ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿ, ತಿದ್ದಿ ಬುದ್ಧಿ ಹೇಳಿ, ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವಲ್ಲಿ ತನ್ನ ಶಕ್ತಿಯನ್ನು ಧಾರೆ ಎರೆಯುವ ಏಕೈಕ ವ್ಯಕ್ತಿ ಗುರುಗಳು. ಭಾರತೀಯ ಗುರು ಪರಂಪರೆ ವೇದವ್ಯಾಸರಿಂದ ಪ್ರಾರಂಭಗೊAಡಿತು. ಡಾ||ರಾಧಾಕೃಷ್ಣರು ಶಾಲಾ ಮಟ್ಟದಲ್ಲಿ ಉಪಾಧ್ಯಾಯರಾಗಿ, ರಾಷ್ಟçಪತಿ ಸ್ಥಾನದವರೆಗೂ ತಲುಪಿದರು. ಅವರು ದೇಶಕ್ಕೆ ಅಧ್ಯಕ್ಷರಾದ ಸಂದರ್ಭ ಅವರ ಹಿಂದಿನ ವಿದ್ಯಾರ್ಥಿಗಳು, ಅಭಿಮಾನಿಗಳು ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಅವರ ಅನುಮತಿ ಕೇಳಿದಾಗ ಅದಕ್ಕೆ ಅವರು ಒಪ್ಪಲಿಲ್ಲ. ನನ್ನ ಹುಟ್ಟಿದ ಹಬ್ಬವನ್ನು ವಿಶೇಷವಾಗಿ ಆಚರಿಸುವ ಬದಲು ಅದನ್ನು ಶಿಕ್ಷಕರ ದಿನ ಎಂದು ಆಚರಿಸಿ ಎಂದು ಕರೆ ಕೊಟ್ಟರು.

ಭಾರತ ದೇಶದಲ್ಲಿ ಶಿಕ್ಷಕರ ದಿನಾಚರಣೆಯ ದಿನ ಅಂತರರಾಷ್ಟಿçÃಯ ಶಿಕ್ಷಕರ ದಿನಾಚರಣೆ ಆಚರಿಸಲ್ಪಡುತ್ತದೆ.

ಸರಿಯಾದ ವಯಸ್ಸಲ್ಲಿ ಸರಿಯಾದ ಗುರು ದೊರಕಿ, ಬದುಕಲ್ಲಿ ಬದಲಾವಣೆ ಆಗಿ ಉನ್ನತ ಸ್ಥಿತಿ ಸೇರಿದಾಗ ಗುರುವಿನ ಮಹತ್ವ ಅರಿವಾಗುತ್ತದೆ.

-ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ

ಟಿ.ಶೆಟ್ಟಿಗೇರಿ, ಮೊ. ೭೭೬೦೬೮೫೬೭೧