ಸಿದ್ದಾಪುರ, ಸೆ. ೪: ಒಂಟಿ ಸಲಗವೊಂದು ಮನೆಯ ಆವರಣದೊಳಗೆ ಸುತ್ತಾಡಿರುವ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿ ನಿವಾಸಿ ಚೇಕಪ್ ಚೆರಿಯನ್ ಎಂಬವರ ಮನೆಯಂಗ ಳಕ್ಕೆ ಭಾನುವಾರ ರಾತ್ರಿ ಲಗ್ಗೆಯಿಟ್ಟ ದೃಶ್ಯ ಚೆರಿಯನ್ ಅವರ ಮನೆ ಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆನೆ ಕಂಡ ಮನೆ ಮಂದಿ ಭಯಭೀತರಾಗಿದ್ದಾರೆ. ಇತ್ತೀಚೆ ಗಷ್ಟೇ ಚೆಕಪ್ ಚೆರಿಯನ್ ಮನೆಯ ಗೋದಾಮಿನ ಹಾಗೂ ನಾಯಿಗೂಡಿನ ಮೇಲೆ ಆನೆ ದಾಳಿ ನಡೆಸಿ ಹಾನಿಗೊಳಿಸಿತ್ತು. ಈ ಬಗ್ಗೆ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅವರೆಗುಂದ ಭಾಗದಲ್ಲಿ ಕಂದಕಗಳು ಹಾಗೂ ಸೋಲಾರ್ ಬೇಲಿಗಳನ್ನು ದಾಟಿ ಕಾಡಾನೆಗಳು ಕಾಫಿ ತೋಟದತ್ತ ಬರುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಕಂದಕಗಳ ನಿರ್ವಹಣೆ ಹಾಗೂ ಸೋಲಾರ್ ಬೇಲಿಯನ್ನು ದುರಸ್ತಿಪಡಿಸಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.