ಗೋಣಿಕೊಪ್ಪಲು, ಸೆ. ೪: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.

ತಿತಿಮತಿ ನಿವಾಸಿಗಳಾದ ಟಿ.ಎ. ರಾಶಿಕ್ (೨೨) ಹಾಗೂ ಸಿ.ಎಸ್ ಜುನೈದ್ (೨೩) ಬಂಧಿತ ಆರೋಪಿಗಳು. ಗೋಣಿಕೊಪ್ಪದಿಂದ ಬಾಳೆಲೆಗೆ ತೆರಳುವ ರಸ್ತೆಯಲ್ಲಿ ಗಾಂಜಾ ಮಾರಾಟದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳ ಸಹಿತ ೧೦೭ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಗಾಂಜಾ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ವೀರಾಜಪೇಟೆ ಡಿವೈಎಸ್ಪಿ ಆರ್. ಮೋಹನ್ ಕುಮಾರ್, ಗೋಣಿಕೊಪ್ಪ ಸಿ.ಪಿ.ಐ. ಗೋವಿಂದರಾಜು, ಪಿ.ಎಸ್.ಐ. ರೂಪದೇವಿ ಬಿರಾದರ್ ನೇತೃತ್ವದಲ್ಲಿ ರಚಿಸಿದ್ದ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.