ಮಡಿಕೇರಿ, ಸೆ. ೪: ಜಿಲ್ಲೆಯ ಮಡಿಕೇರಿ ತಾಲೂಕಿನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಗಡಿಭಾಗದಲ್ಲಿ ಅಮೆಚೂರು ಎಂಬ ಪ್ರದೇಶದಲ್ಲಿ ಕರ್ಗಲ್ಲಿನ ಮಧ್ಯೆ ಇರುವ ಕೆಂಪು ಹರಳು ಗಣಿಗಾರಿಕೆ ಮತ್ತೆ ತಲೆ ಎತ್ತುತ್ತಿದೆ ಎಂಬ ಗುಮಾನಿ ಗ್ರಾಮಸ್ಥ ರಲ್ಲಿ ಮೂಡಿರುವ ಬಗ್ಗೆ ಸಣ್ಣಪುಟ್ಟ ಧ್ವನಿಗಳು ಕೇಳಿಬರುತ್ತಿವೆ!
ಇದಕ್ಕೆ ಪುಷ್ಟಿ ಎಂಬAತೆ ಶನಿ ವಾರ ಪೆರಾಜೆ ಗ್ರಾಮದ ಅಮೆಚೂರು ಎಂಬಲ್ಲಿ ನಡೆಯುತ್ತಿರುವ ಕರ್ಗಲ್ಲು ಗಣಿಗಾರಿಕೆಗೆ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ಧಾಳಿ ನಡೆಸಿದ್ದಾರೆ. ಶಾಸಕ ಪೊನ್ನಣ್ಣ ?ಅವರಿಗೆ, ಸ್ಫೋಟಕ ಬಳಸಿ ಗಣಿ ಗಾರಿಕೆ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥ ರಿಂದ ದೂರು ಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸ್ಪೋಟಕ ಬಳಸಿ ಗಣಿಗಾರಿಕೆ ನಡೆಸದಂತೆ ಆದೇಶ ಮಾಡಲು ಸೂಚಿಸಿದ್ದರು. ಹಾಗೂ ಕಂದಾಯ ಇಲಾಖೆ ಎಚ್ಚೆತ್ತು ಇದೀಗ ದಿಢೀರ್ ಧಾಳಿ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎರಡು ವರ್ಷಗಳ ಹಿಂದೆ ಪೆರಾಜೆಯ ವಜ್ರಪುರದಲ್ಲಿ ಅಕ್ರಮ ಕೆಂಪುಹರಳು ಗಣಿಗಾರಿಕೆ ನಡೆಯುತ್ತಿತ್ತು.