ವೀರಾಜಪೇಟೆ, ಸೆ. ೨: ವ್ಯಕ್ತಿಯೋರ್ವರು ಮದ್ಯದೊಂದಿಗೆ ಆಕಸ್ಮಿಕವಾಗಿ ವಿಷವನ್ನು ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ತಡ ರಾತ್ರಿ ಮರಣಹೊಂದಿದ ಘಟನೆ ವೀರಾಜಪೇಟೆ ಬೇಟೋಳಿ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ನಿವಾಸಿ ಬಿ.ಎಂ. ಮಂಜಯ್ಯ (೬೨) ಮೃತ ವ್ಯಕ್ತಿ.

ಘಟನೆ ವಿವರ: ಮೃತ ಮಂಜಯ್ಯ ಆ.೩೧ ರಂದು ಮನೆಯಲ್ಲಿ ಯಾರು ಇಲ್ಲದ ಸಮಯ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ. ಕುಡಿದ ಅಮಲಿನಲ್ಲಿ ಮನೆಯ ಹಿಂಬದಿಯಲ್ಲಿದ್ದ ತೋಟಕ್ಕೆ ಬಳಸುವ ಕ್ರಿಮಿನಾಶಕವನ್ನು ಆಕಸ್ಮಿಕವಾಗಿ ಕುಡಿದಿದ್ದಾರೆ. ಮೃತರ ಪತ್ನಿ ಬಿ.ಎಂ. ರೇಖಾ ಮತ್ತು ಮಗಳು ಸನಿಹದ ಕೆರೆಯ ಭಾಗದಲ್ಲಿ ಬಟ್ಟೆ ಒಗೆಯಲು ತೆರಳಿ ಮನೆಗೆ ಬಂದ ಸಂದರ್ಭ ಪತಿ ಮಂಜಯ್ಯ ನೆಲದ ಮೇಲೆ ವಾಂತಿ ಮಾಡಿರುವುದು ಕಂಡುಬAದಿದೆ. ಸನಿಹದಲ್ಲಿ ಕ್ರಿಮಿ ನಾಶಕ ಬಾಟಲ್ ಪತ್ತೆಯಾಗಿದೆ. ಪತಿಯನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ತಾ.೧ರಂದು ರಾತ್ರಿ ೧೧ರ ವೇಳೆಗೆ ಮರಣ ಹೊಂದಿರುತ್ತಾರೆ. ಮೃತ ಮಂಜಯ್ಯ ಅವರ ಪತ್ನಿ ರೇಖಾ ಅವರು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಅನ್ವಯ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. -ಕಿಶೋರ್ ಶೆಟ್ಟಿ