ಮಡಿಕೇರಿ, ಸೆ.೧ : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ನೆಹರು ಯುವ ಕೇಂದ್ರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಾಕತ್ತೂರು ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ತಾ. ೩ ರಂದು ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ತ್ರಿನೇತ್ರ ಯುವಕ ಸಂಘದ ಕಾರ್ಯದರ್ಶಿ ಎಂ.ಎA.ಅಬೂಬಕ್ಕರ್, ತೊಂಭತ್ತುಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ.
ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ೧ ರಿಂದ ೩ನೇ ತರಗತಿ ವಿದ್ಯಾರ್ಥಿಗಳಿಗೆ ವಿಷದ ಚೆಂಡು, ಸಾರ್ವಜನಿಕ ಪುರುಷ ಹಾಗೂ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ರಸ್ತೆ ಓಟ, ಸಾರ್ವಜನಿಕ ಮಹಿಳೆಯರಿಗೆ ಸೂಜಿ ನೂಲಿನ ಓಟ, ಸಂಗೀತ ಕುರ್ಚಿ, ನಿಂಬೆ ಚಮಚ, ಸಾರ್ವಜನಿಕ ಪುರುಷರಿಗೆ ಗೋಣಿ ಚೀಲದ ಓಟ, ಬಸ್ಸಾಟ, ಭಾರದ ಗುಂಡು ಎಸೆತ, ೩ ರಿಂದ ೫ನೇ ತರಗತಿ ಬಾಲಕ, ಬಾಲಕಿಯರಿಗೆ ೧೦೦ ಮೀ. ಓಟ, ೬ ರಿಂದ ೭ನೇ ತರಗತಿ ಯುವಕ, ಯುವತಿಯರಿಗೆ ೨೦೦ ಮೀ. ಓಟ, ೮ ರಿಂದ ೧೦ನೇ ತರಗತಿ ಯುವಕ, ಯುವತಿಯರಿಗೆ ೨೦೦ ಮೀ. ಓಟ, ಪಿಯುಸಿ ವಿದ್ಯಾರ್ಥಿಗಳಿಗೆ ೩೦೦ ಮೀ ಓಟ, ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಕಾಳು ಹೆಕ್ಕುವುದು, ದಂಪತಿ ಓಟದ ಸ್ಪರ್ಧೆ ನಡೆಯಲಿದೆ.