ವೀರಾಜಪೇಟೆ, ಸೆ. ೧: ಪಟ್ಟಣದ ಛತ್ರಕೆರೆ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ದೇಗುಲದಲ್ಲಿ ರಾಯರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇP,À ಪಾದ ಪೂಜೆ, ಕನಕ ಅಭಿಷೇಕ ಸೇರಿದಂತೆ ವಿವಿಧ ಪೂಜೆ ಪುನಸ್ಕಾರಗಳು, ದೇವರ ನಾಮಸ್ಮರಣೆ, ಭಜನೆ ನಡೆದವು. ರಾಯರಿಗೆ ವಿಶೇಷ ಪೂಜೆಗಳು ನಡೆದು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.