ಗೋಣಿಕೊಪ್ಪಲು, ಸೆ. ೨: ತೋಟಗಾರಿಕೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಸಂಶೋಧನೆಗಳನ್ನು ಟಾಟಾ ಕಾಫಿಯ ಉತ್ತಮ ತೋಟಗಾರಿಕಾ ನಿರ್ವಹಣೆ ಹಾಗೂ ಪದ್ಧತಿಗಳನ್ನು ಕಾಫಿ ಬೆಳೆಗಾರರಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಸಂವಾದ ಹಾಗೂ ವಿಚಾರ ವಿನಿಮಯ ನಡೆಯಿತು.
ಪಾಲಿಬೆಟ್ಟ ಕಾಫಿ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯಿAದ ಆಯೋಜನೆ ಗೊಂಡಿದ್ದ ವಾರ್ಷಿಕ ಸಂಶೋಧನೆ ಮತ್ತು ಅಭಿವೃದ್ಧಿ ದಿನವನ್ನು ಇನ್ವೆಂಟಿಕಾದ ೬ನೇ ಆವೃತ್ತಿಯನ್ನು ಟಾಟಾ ಕಾಫಿಯಲ್ಲಿ ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಪ್ರಖ್ಯಾತ ವಿಜ್ಞಾನಿಗಳು, ಪ್ರಗತಿಪರ ರೈತರು ಹಾಗೂ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಸ್ಪರ ವಿಚಾರ ವಿನಿಮಯ ಹಾಗೂ ಸಂವಾದ ನಡೆಸಿದರು. ಪ್ರತಿವರ್ಷದಂತೆ ಈ ಭಾರಿಯೂ ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನ ಜಿಲ್ಲೆಯ ಬೆಳೆಗಾರರು, ಕರ್ನಾಟಕ ಮತ್ತು ಕೊಡಗು ಕಾಫಿ ಬೆಳೆಗಾರರ ಸಂಘದ ಸದಸ್ಯರು, ವಿಜ್ಞಾನಿಗಳು ಉದ್ಯಮದ ಪ್ರಸ್ತುತ ಅಗತ್ಯಗಳ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಾಟಾ ಕಾಫಿ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಚಾಕೋ ಪಿ. ಥಾಮಸ್, ಪ್ರಸ್ತುತ ಸನ್ನಿವೇಶದಲ್ಲಿ ಕಾಫಿ ಉದ್ಯಮವು ಮತ್ತಷ್ಟು ಚೇತರಿಕೆ ಕಾಣಲು ಸಂಸ್ಥೆಯ ಸಂಶೋಧಕರು ಹಲವು ರೀತಿಯ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಬೆಳೆಗಾರರು ತಮ್ಮ ಕಾಫಿ ಉದ್ಯಮವನ್ನು ಉತ್ತಮಗೊಳಿಸಲು ಅವಕಾಶವಾಗುತ್ತದೆ. ಆ ನಿಟ್ಟಿನಲ್ಲಿ ಟಾಟಾ ಕಾಫಿ ಸಂಶೋಧನೆಯು ಪ್ರತಿ ವರ್ಷ ಬೆಳೆಗಾರರನ್ನು, ವಿಜ್ಞಾನಿಗಳನ್ನು ಹಾಗೂ ಸಂಶೋಧಕರನ್ನು ಒಟ್ಟಾಗಿ ವಿಚಾರ ವಿನಿಮಯ ನಡೆಸಲಾಗುತ್ತಿದೆ ಎಂದರು.
ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಶೋಕ್ ಎಸ್. ಆಲೂರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ತೋಟಗಾರಿಕೆ ಉದ್ಯಮದಲ್ಲಿ ಸಹಯೋಗ, ಯಾಂತ್ರೀಕರಣ, ಮೌಲ್ಯವರ್ಧನೆ ಮತ್ತು ಡಿಜಿಟಲೀಕರಣದ ಮಹತ್ವದ ಕುರಿತು ಸಮಗ್ರ ಮಾಹಿತಿ ಒದಗಿಸಿದರು.
ಕಾಫಿ ತೋಟದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದಲ್ಲಿ ಸವಾಲುಗಳ ಬಗ್ಗೆ ಟಾಟಾ ಕಾಫಿ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಚಾಕೋ ಪಿ. ಥಾಮಸ್ ವಿಷಯ ಮಂಡನೆ ಮಾಡಿದರು. ಅಲ್ಲದೆ ತೋಟದ ಸುಧಾರಣೆ ಮತ್ತು ವೆಚ್ಚ ನಿಯಂತ್ರಣದಲ್ಲಿ ಸಂಶೋಧನೆಯ ಪ್ರಾಮುಖ್ಯತೆಯ ಕುರಿತು ತಿಳಿಸಿದರು. ಟಾಟಾ ಕಾಫಿ ಸಂಶೋಧನೆಯ ನವೀಕರಣ ಉತ್ತಮ ತೋಟಗಾರಿಕಾ ನಿರ್ವಹಣೆ, ಪ್ರಸ್ತುತ ಬೆಳವಣಿಗೆ, ಮುಖ್ಯಸ್ಥರು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಬಗ್ಗೆ ನೆರೆದಿದ್ದ ಬೆಳೆಗಾರರಿಗೆ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಭಾಗದಿಂದ ಆಗಮಿಸಿದ ಪ್ರಖ್ಯಾತ ವಿಜ್ಞಾನಿಗಳು ಮತ್ತು ಪ್ರಗತಿ ಪರ ರೈತರಿಂದ ಸಂವಾದ ಮತ್ತು ವಿಚಾರ ವಿನಿಮಯ ನಡೆಯಿತು. ಹಲವು ಸಮಸ್ಯೆಗಳಿಗೆ ಬೆಳೆಗಾರರು ವಿಜ್ಞಾನಿಗಳಿಂದ ಹಾಗೂ ಸಂಶೋಧಕರಿAದ ಮಾಹಿತಿ ಪಡೆದರು. ಪಾಲಿಬೆಟ್ಟದಲ್ಲಿರುವ ಟಾಟಾ ಕಾಫಿ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯಲ್ಲಿ ಇತ್ತೀಚಿನ ಕಾಫಿ ಇತರ ಬೆಳೆಗಳ ಮಾಹಿತಿ, ಮೌಲ್ಯವರ್ಧನೆ ಮತ್ತು ಸಂಶೋಧನಾ ವಿಷಯಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾಫಿಯ ಗುಣಮಟ್ಟ ಮತ್ತು ಕಪ್ಪಿಂಗ್ ಕಾರ್ಯಕ್ರಮವನ್ನು ಟಾಟಾ ಕಾಫಿ ಲಿಮಿಟೆಡ್ನ ಹಿರಿಯ ವ್ಯವಸ್ಥಾಪಕರು, ಗುಣಮಟ್ಟ ವಿಭಾಗದ ನವೀನ ನಾಗರಾಜು ಆಯೋಜಿಸಿದ್ದರು. ಟಾಟಾ ಕಾಫಿ ಪ್ಲಾಂಟೇಶನ್ನ ಹಿರಿಯ ಪ್ರಧಾನ ವ್ಯವಸ್ಥಾಪಕ ಪಿ.ಎ. ಮಂದಣ್ಣ, ಟಾಟಾ ಕಾಫಿ ಲಿಮಿಟೆಡ್ ಉಪಾಧ್ಯಕ್ಷ ಡಾ. ಪಿ. ಕುರಿಯನ್ ರಾಫೆಲ್, ಪರಿಸರ ಸ್ಥಿರತೆ, ಸಂಶೋಧನೆ ಮತ್ತು ಅಭಿವೃದ್ಧಿ ಬಗ್ಗೆ ವಿಷಯ ಮಂಡಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಅಧಿಕಾರಿಗಳು, ಸಂಶೋಧನಾ ವಿಭಾಗದ ವಿಜ್ಞಾನಿಗಳು, ಕಾಫಿ ಮಂಡಳಿ ಸದಸ್ಯರು ಹಾಗೂ ವಿಜ್ಞಾನಿಗಳು, ಸಾಂಬಾರ ಬೆಳೆಗಳ ಸಂಶೋಧನಾ ಮಂಡಳಿ, ತೋಟಗಾರಿಕೆ ಬೆಳೆ ಸಂಶೋಧನಾ ಸಂಸ್ಥೆಯ ಸದಸ್ಯರು ಹಾಗೂ ವಿಜ್ಞಾನಿಗಳು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಿಂದ ೨೦೦ಕ್ಕೂ ಅಧಿಕ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆಗೆ ಸಂಬAಧಿಸಿದAತೆ ಯಾಂತ್ರೀಕರಣ, ಮೌಲ್ಯವರ್ಧನೆ, ಗುಣಮಟ್ಟ, ವಾತಾವರಣದ ಬದಲಾವಣೆ ಮತ್ತು ನಿರ್ವಹಣೆ, ಪ್ರಪಂಚದ ಕಾಫಿ ಮಾರುಕಟ್ಟೆ ಮತ್ತು ಬೆಲೆ ನಿಯಂತ್ರಣ, ಡಿಜಿಟಲೀಕರಣ ವಿಷಯಗಳನ್ನು ಪ್ರಸ್ತುತ ಪಡಿಸಲಾಯಿತು. ಸಂವಹನ ವ್ಯವಸ್ಥಾಪಕರಾದ ರೋಶನಿ ಅಲೆಗ್ಜಾಂಡರ್, ಸಂಶೋಧನ ಅಭಿವೃದ್ಧಿ ವಿಭಾಗದ ಸಹಾಯಕ ವ್ಯವಸ್ಥಾಪಕ ಅಭಿಲಾಷ್ ರಾಜರತ್ನಂ ನಿರೂಪಿಸಿ, ಪರಿಸರ ಸ್ಥಿರತೆ ವಿಭಾಗದ ಉಪಾಧ್ಯಕ್ಷ ಎಂ.ಬಿ.ಗಣಪತಿ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕ ಪಿ.ಎ. ಮಂದಣ್ಣ ವಂದಿಸಿದರು. ಬೆಳೆಗಾರರಿಗೆ ಬೇಕಾದ ಗುಣಮಟ್ಟದ ರಸಗೊಬ್ಬರ, ಯಂತ್ರೋಪಕರಣ ಸೇರಿದಂತೆ ಇನ್ನಿತರ ವಸ್ತು ಪ್ರದರ್ಶನ ಮತ್ತು ಮಾರಾಟವು ನಡೆಯಿತು.