ಸೋಮವಾರಪೇಟೆ, ಸೆ. ೨: ಈ ಹಿಂದೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಇಂದು ಸಮಾಜದ ಎಲ್ಲಾ ರಂಗದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪುರುಷ ಪ್ರಧಾನ ಎಂದೇ ಬಿಂಬಿತವಾಗಿರುವ ಸಮಾಜದಲ್ಲಿ ಮಹಿಳೆಯರೂ ಕೂಡ ಪುರುಷರಿಗೆ ಸರಿಸಮನಾಗಿ ಸಂಘಟಿತರಾಗುತ್ತಿದ್ದು, ಸೋಮ ವಾರಪೇಟೆಯ ಮಹಿಳೆಯ ಗುಂಪು ತಮ್ಮದೇ ಸಹಕಾರ ಸಂಘ ಕಟ್ಟಿಕೊಂಡು ಇದೀಗ ೨೮ನೇ ವರ್ಷದತ್ತ ಕಾಲಿಡುತ್ತಿದ್ದಾರೆ.

ಸಹಕಾರ ಸಂಘದ ಮೂಲಕ ಮಹಿಳೆಯರು ಅತೀ ಹೆಚ್ಚು ಆರ್ಥಿಕ ಪ್ರಗತಿ ಹೊಂದಬೇಕೆAಬ ಆಶಯದಿಂದ ಆರಂಭಗೊAಡ ಬ್ಯಾಂಕ್ ಇಂದು ಸರ್ವ ಸ್ಪರ್ಶಿ ಯಂತಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕತೆಯ ಹೂಡಿಕೆಯೊಂದಿಗೆ ಲಾಭಾಂಶದಲ್ಲಿ ಮುನ್ನುಗ್ಗುತ್ತಿದೆ.

ಸೋಮವಾರಪೇಟೆಯ ನಂ.೧೯೭೧೨ನೇ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ಇದೀಗ ತನ್ನದೇ ಸ್ವಂತ ಕಟ್ಟಡ ಹೊಂದಿದ್ದು, ೨೫ನೇ ವರ್ಷದ ಸಂಭ್ರಮವನ್ನು ಚಿರಸ್ಥಾಯಿಯನ್ನಾಗಿಸಿದೆ. ಪಟ್ಟಣದ ಮಹದೇಶ್ವರ ಬಡಾವಣೆಗೆ ತೆರಳುವ ರಸ್ತೆ ಬದಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಉತ್ತಮ ವ್ಯವಹಾರದೊಂದಿಗೆ ಜನಮನ್ನಣೆ ಗಳಿಸುತ್ತಾ ಸಾಗುತ್ತಿದೆ. ಮಹಿಳಾ ಆಡಳಿತವೇ ಪ್ರಧಾನವಾಗಿರುವ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ೨೭ನೇ ವಾರ್ಷಿಕ ಮಹಾಸಭೆ ತಾ. ೪ರಂದು ಪೂರ್ವಾಹ್ನ ೧೧ ಗಂಟೆಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಸಭಾಂಗಣದಲ್ಲಿ ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವರದಿ ಸಾಲಿನ ೪೩ ಸದಸ್ಯರನ್ನು ಒಳಗೊಂಡAತೆ ಒಟ್ಟು ೧೮೫೨ ಸದಸ್ಯರು ಸಂಘದಲ್ಲಿದ್ದು, ಕಳೆದ ಸಾಲಿಗಿಂತ ವರದಿ ಸಾಲಿನಲ್ಲಿ ಪಾಲು ಬಂಡವಾಳವೂ ಏರಿಕೆಯಾಗಿದೆ. ವರ್ಷಾಂತ್ಯಕ್ಕೆ ಒಟ್ಟು ೩೫,೭೮,೭೦೦ ರೂಪಾಯಿ ಪಾಲು ಬಂಡವಾಳವನ್ನು ಸಂಘ ಹೊಂದಿದೆ.

ಸAಘದ ಸದಸ್ಯ ರುಗಳಿಂದ ಠೇವಣಿ ಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವ ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೆಡಿಸಿಸಿ ಬ್ಯಾಂಕ್‌ನಿAದ ೩೦ ಲಕ್ಷ ಹೆಚ್ಚುವರಿ ಸಾಲವನ್ನು ಪಡೆದು ಸಂಘದ ಮೂಲಕ ಸದಸ್ಯರಿಗೆ ನೀಡಲಾಗುತ್ತಿದೆ.

೨೦೨೨-೨೩ನೇ ಸಾಲಿನಲ್ಲಿ ವಿವಿಧ ಉದ್ದೇಶಗಳಿಗಾಗಿ ಸದಸ್ಯರುಗಳಿಗೆ ೯೯,೯೫,೯೪೧ ರೂಪಾಯಿ ಜಾಮೀನು ಸಾಲ ನೀಡಲಾಗಿದೆ. ೫೯.೬೯ ಲಕ್ಷ ರೂಪಾಯಿಯನ್ನು ಆಭರಣ ಸಾಲವಾಗಿ ನೀಡಲಾಗಿದೆ. ೫೩.೯೪ ಲಕ್ಷವನ್ನು ಪಿಗ್ಮಿ ಓವರ್ ಡ್ರಾಫ್ಟ್ ಸಾಲ ನೀಡಲಾಗಿದೆ. ೪.೩೧ಲಕ್ಷ ನಿರಖು ಠೇವಣಿ ಸಾಲ ವಿತರಿಸಲಾಗಿದೆ. ಕೇವಲ ಸಾಲ ವಿತರಣೆ ಮಾತ್ರವಲ್ಲದೇ ವಸೂಲಾತಿಯಲ್ಲೂ ಬ್ಯಾಂಕ್ ಗಮನಾರ್ಹ ಸಾಧನೆ ಮಾಡುತ್ತಿದ್ದು, ಕಳೆದ ಸಾಲಿನಲ್ಲಿ ಶೇ.೯೭.೫೨ರಷ್ಟು ಸಾಲ ವಸೂಲಾತಿಯಾಗಿದೆ.

ಸಂಘದಲ್ಲಿ ಉಳಿತಾಯ ಖಾತೆ, ನಿರಖು ಠೇವಣಿ, ರೆಕರಿಂಗ್ ಡೆಪಾಸಿಟ್, ನಿತ್ಯನಿಧಿ ಠೇವಣಿ ಸೇರಿದಂತೆ ಒಟ್ಟು ೨,೦೮,೭೧,೮೯೨ ರೂಪಾಯಿ ಠೇವಣಿ ಹೊಂದಿದೆ. ಮಾರ್ಚ್ ಅಂತ್ಯದಲ್ಲಿ ಸಂಘವು ಒಟ್ಟಾರೆ ಯಾಗಿ ೧೩.೫೧ ಕೋಟಿ ವ್ಯವಹಾರ ನಡೆಸಿ ಪ್ರಗತಿ ಪಥದತ್ತ ಸಾಗುತ್ತಿದೆ.

೨೭ನೇ ವರ್ಷದ ಮಹಾ ಸಭೆಯು ತಾ. ೪ ರಂದು ನಡೆಯಲಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿರುವ ಮಹಿಳಾ ಪ್ರಧಾನ ಸಹಕಾರ ಸಂಘವು ೨೮ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ.

ಪ್ರಸಕ್ತ ಸಂಘದ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ, ಕವಯತ್ರಿ ಜಲಜಾ ಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಪ.ಪಂ. ಸದಸ್ಯರೂ ಆಗಿರುವ ಜಯಂತಿ ಶಿವಕುಮಾರ್ ಸೇವೆ ಸಲ್ಲಿಸುತ್ತಿದ್ದು, ಲೋಕೇಶ್ವರಿ ಗೋಪಾಲ್, ಬೇಬಿ ಚಂದ್ರಹಾಸ, ಉಮಾ ರುದ್ರಪ್ರಸಾದ್, ಶೋಭಾ ಶಿವರಾಜ್, ಸಂಧ್ಯಾರಾಣಿ ಕೃಷ್ಣಪ್ಪ, ರೂಪಶ್ರೀ ರವಿಕುಮಾರ್, ಲೀಲಾವತಿ ನಿರ್ವಾಣಿ, ಕವಿತಾ ವಿರೂಪಾಕ್ಷ, ವಿದ್ಯಾ ಬಿ.ಕೆ., ದಾಕ್ಷಾಯಣಮ್ಮ, ಹೆಚ್.ಬಿ. ಮೀನಾಕ್ಷಿ ಅವರುಗಳು ನಿರ್ದೇಶಕರಾಗಿದ್ದಾರೆ.

- ವಿಜಯ್ ಹಾನಗಲ್