ಮಡಿಕೇರಿ, ಸೆ. ೨: ನ್ಯಾಯಾಧೀಶ ರಾಗಿ ನೇಮಕಗೊಂಡ ಮಡಿಕೇರಿ ವಕೀಲರ ಸಂಘದ ಸದಸ್ಯ ಅಬು ತಾಹೀರ್ ಅವರನ್ನು ಮಡಿಕೇರಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಶ್ಯಾಂಪ್ರಸಾದ್, ನ್ಯಾಯಾಧೀಶರ ಸ್ಥಾನ ಅತ್ಯಂತ ಗೌರವ ಮತ್ತು ಪ್ರತಿಷ್ಠೆಯದ್ದಾಗಿದೆ ಎಂದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಮಾತ ನಾಡಿ, ಅಬು ತಾಹೀರ್ ಅವರ ಸಾಧನೆ ಯುವ ವಕೀಲರಿಗೂ ಪ್ರೇರಣೆಯಾ ಗಲಿ. ಮತ್ತಷ್ಟು ಯುವ ವಕೀಲರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತಿ, ಸಿವಿಲ್ ನ್ಯಾಯಾಧೀಶರಾದ ಮುನಿ ರತ್ನ, ಸಿವಿಲ್ ನ್ಯಾಯಾಧೀಶರಾದ ನಾಗೇಶ್, ವಕೀಲರ ಸಂಘದ ಕಾರ್ಯದರ್ಶಿ ಡಿ.ಎಂ. ಕೇಶವ, ಉಪಾಧ್ಯಕ್ಷ ಎಂ.ಪಿ. ನಾಗರಾಜು, ವಕೀಲ ಟಿ.ಹೆಚ್. ಅಬೂಬಕರ್ ಸರ್ಕಾರಿ ಅಭಿಯೋಜಕರು, ವಕೀಲರ ಸಂಘದ ಸದಸ್ಯರು, ನ್ಯಾಯವಾದಿಗಳು ಹಾಜರಿದ್ದರು.