ಚೆಟ್ಟಳ್ಳಿ, ಆ. ೩೧: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಛಾಪು ಮೂಡಿಸುತ್ತಿರುವ ಲಾಭದಾಯಕ ಬೆಳೆಯಾದ ಮಾಡ ಹಾಗಲಕಾಯಿ ಬೆಳೆಯು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಉತ್ತಮ ಫಸಲಿನೊಂದಿಗೆ ಕಂಗೊಳಿಸುತ್ತಿದೆ.

ಮಳೆಗಾಲದಲ್ಲಿ ಮಲೆನಾಡಿನ ಕಾಡು ಮೇಡುಗಳಲ್ಲಿ ಕಂಡು ಬರುವ, ಸ್ಥಳೀಯ ಭಾಷೆಯಲ್ಲಿ ಪಾವಕ್ಕ, ಕಾಡುಪೀರೆ ಎಂದು ಕರೆಯಲ್ಪಡುವ, ಆಂಗ್ಲ ಭಾಷೆಯಲ್ಲಿ ಸೈನ್‌ಗಾರ್ಡ್ ಹೆಸರಿರುವ ಹಲವು ಬಗೆಯ ವಿಟಮಿನ್‌ಗಳನ್ನು ಹೊಂದಿರುವ ಮಾಡಹಾಗಲ ಕಾಯಿಯ ಮೂಲಕ ವಿವಿಧ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಇವುಗಳನ್ನು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನೆಟ್ಟು ಬೆಳೆಸಲಾಗುತ್ತಿದೆ. ಅತ್ಯಧಿಕ ಫಸಲು ಹಾಗೂ ಆದಾಯ ಗಳಿಸಬಲ್ಲ ಉನ್ನತ ತಳಿಯ ಮಾಡ ಹಾಗಲ ಬೆಳೆಯನ್ನು ಬೆಳೆದು ಉತ್ತಮ ಫಸಲಿನ ಜೊತೆಗೆ ಈವರೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ರೈತರಿಗೆ ಕೇಂದ್ರದಿAದ ನೀಡಲಾಗಿದೆ.

ಹವಾಮಾನಕ್ಕೆ ಹೊಂದಿಕೊಳ್ಳುವ ಹಲವು ಬಗೆಗಳ ಅಸ್ಸಾಂನ ಮಾಡ ಹಾಗಲಕಾಯಿ ತಳಿಗಳನ್ನು ಈ ಹಿಂದೆ ತಂದು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ನೆಟ್ಟು ಬೆಳೆಸಿ ಪರೀಕ್ಷಿಸಿದ್ದು, ಉತ್ತಮ ಫಸಲನ್ನು ಪಡೆಯುವಲ್ಲಿ ಇಲಾಖಾ ಸಿಬ್ಬಂದಿ ಸಫಲರಾದರು. ನಾಟಿ ತಳಿ ಯಲ್ಲಿ ಪರಾಗಸ್ಪರ್ಶ ಕ್ರಿಯೆ ಸ್ವಾಭಾವಿಕವಾಗಿದ್ದರೆ ನೂತನ ತಳಿಯಲ್ಲಿ ಗಂಡುಗಿಡದ ಹೂವನ್ನು ಹೆಣ್ಣುಗಿಡದ ಹೂವಿಗೆ ಸ್ಪರ್ಶಿಸುವ ಮೂಲಕ ಕೃತಕವಾಗಿ ಪರಾಗಸ್ವರ್ಶ ಕ್ರಿಯೆಯನ್ನು ಮಾಡಬೇಕಾಗುತ್ತದೆ. ನಾಟಿತಳಿಗೆ ಹೋಲಿಸಿದರೆ ಅಸ್ಸಾಂತಳಿ ಹೆಚ್ಚಿನ ಗಾತ್ರ ಚೆಟ್ಟಳ್ಳಿ, ಆ. ೩೧: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಛಾಪು ಮೂಡಿಸುತ್ತಿರುವ ಲಾಭದಾಯಕ ಬೆಳೆಯಾದ ಮಾಡ ಹಾಗಲಕಾಯಿ ಬೆಳೆಯು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಉತ್ತಮ ಫಸಲಿನೊಂದಿಗೆ ಕಂಗೊಳಿಸುತ್ತಿದೆ.

ಮಳೆಗಾಲದಲ್ಲಿ ಮಲೆನಾಡಿನ ಕಾಡು ಮೇಡುಗಳಲ್ಲಿ ಕಂಡು ಬರುವ, ಸ್ಥಳೀಯ ಭಾಷೆಯಲ್ಲಿ ಪಾವಕ್ಕ, ಕಾಡುಪೀರೆ ಎಂದು ಕರೆಯಲ್ಪಡುವ, ಆಂಗ್ಲ ಭಾಷೆಯಲ್ಲಿ ಸೈನ್‌ಗಾರ್ಡ್ ಹೆಸರಿರುವ ಹಲವು ಬಗೆಯ ವಿಟಮಿನ್‌ಗಳನ್ನು ಹೊಂದಿರುವ ಮಾಡಹಾಗಲ ಕಾಯಿಯ ಮೂಲಕ ವಿವಿಧ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಇವುಗಳನ್ನು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನೆಟ್ಟು ಬೆಳೆಸಲಾಗುತ್ತಿದೆ. ಅತ್ಯಧಿಕ ಫಸಲು ಹಾಗೂ ಆದಾಯ ಗಳಿಸಬಲ್ಲ ಉನ್ನತ ತಳಿಯ ಮಾಡ ಹಾಗಲ ಬೆಳೆಯನ್ನು ಬೆಳೆದು ಉತ್ತಮ ಫಸಲಿನ ಜೊತೆಗೆ ಈವರೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ರೈತರಿಗೆ ಕೇಂದ್ರದಿAದ ನೀಡಲಾಗಿದೆ.

ಹವಾಮಾನಕ್ಕೆ ಹೊಂದಿಕೊಳ್ಳುವ ಹಲವು ಬಗೆಗಳ ಅಸ್ಸಾಂನ ಮಾಡ ಹಾಗಲಕಾಯಿ ತಳಿಗಳನ್ನು ಈ ಹಿಂದೆ ತಂದು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ನೆಟ್ಟು ಬೆಳೆಸಿ ಪರೀಕ್ಷಿಸಿದ್ದು, ಉತ್ತಮ ಫಸಲನ್ನು ಪಡೆಯುವಲ್ಲಿ ಇಲಾಖಾ ಸಿಬ್ಬಂದಿ ಸಫಲರಾದರು. ನಾಟಿ ತಳಿ ಯಲ್ಲಿ ಪರಾಗಸ್ಪರ್ಶ ಕ್ರಿಯೆ ಸ್ವಾಭಾವಿಕವಾಗಿದ್ದರೆ ನೂತನ ತಳಿಯಲ್ಲಿ ಗಂಡುಗಿಡದ ಹೂವನ್ನು ಹೆಣ್ಣುಗಿಡದ ಹೂವಿಗೆ ಸ್ಪರ್ಶಿಸುವ ಮೂಲಕ ಕೃತಕವಾಗಿ ಪರಾಗಸ್ವರ್ಶ ಕ್ರಿಯೆಯನ್ನು ಮಾಡಬೇಕಾಗುತ್ತದೆ. ನಾಟಿತಳಿಗೆ ಹೋಲಿಸಿದರೆ ಅಸ್ಸಾಂತಳಿ ಹೆಚ್ಚಿನ ಗಾತ್ರ ದರ ಫಲವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟç, ತೆಲಂಗಾಣ, ಒಡಿಸ್ಸಾದ ಕೃಷಿಕರು ಚೆಟ್ಟಳ್ಳಿ ಕೇಂದ್ರೀಯ ಸಂಶೋ ಧನಾ ಕೇಂದ್ರದಲ್ಲಿ ಸಂಶೋಧಿತ ಉತ್ತಮ ತಳಿಯ ಮಾಡಹಾಗಲ ಕಾಯಿ ಗಿಡಗಳÀನ್ನು ಪಡೆದು ಎಕರೆಗಟ್ಟಲೆ ಬೆಳೆದು ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.

ಮಾಡಹಾಗಲಕಾಯಿ ಬೆಳೆಯು ಲಾಭದಾಯಕವಾಗಿದ್ದು ಚೆಟ್ಟಳ್ಳಿ ಸಂಶೋಧನಾ ಕೇಂದ್ರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ೮ ಅಡಿಗೆ ಪಾತಿ ಗಳನ್ನು ಮಾಡಿ ೭ ಅಡಿಗೊಂದು ಸಸಿನೆಟ್ಟು ತಂತಿಬೇಲಿಗಳ ವಿಧಾನದಲ್ಲಿ ಮಾಡಹಾಗಲಕಾಯಿ ಬಳ್ಳಿಯನ್ನು ನೆಟ್ಟು ಬೆಳೆಸಲಾಗುತ್ತಿದೆ. ಫಸಲಿನ ನಂತರ ಗೆಡ್ಡೆಗಳನ್ನು ಅಗೆದು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ ಪುನಃ ನಾಟಿ ಮಾಡಬಹುದು. ಮಳೆ ಇಲ್ಲದ ಸಮಯದಲ್ಲಿ ಪ್ರತಿ ಬಳ್ಳಿಗೂ ಹನಿ ನೀರಾವರಿ ವ್ಯವಸ್ಥೆ ಜೊತೆಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ನೀಡಲಾಗುತ್ತಿದ್ದು ಕೀಟಗಳ ರಕ್ಷಣೆಗೆ ಟ್ಯಾçಪರ್‌ಗಳನ್ನು ಬಳಸಲಾಗುತ್ತಿದೆ ಎಂದು ಕೇಂದ್ರದ ವಿಜ್ಞಾನಿ ಡಾ. ಮರುಳಿಧರ್ ಬಿ.ಎಂ. ಹೇಳುತ್ತಾರೆ.

ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಈಗಾಗಲೇ ಒಟ್ಟು ಒಂದು ಲಕ್ಷಕ್ಕೂ ಅಧಿಕ ಸಸಿಗಳನ್ನು ಮಾರಾಟ ಮಾಡಿದ್ದು ಈ ವರ್ಷ ಆನ್‌ಲೈನ್ ಮೂಲಕವೂ ಕೃಷಿಕರಿಂದ ಬೇಡಿಕೆಯಿದ್ದು ೨೦ ಸಾವಿರ ಸಸಿಗಳು ಮಾರಾಟವಾಗಿವೆ ಎಂಬುದಾಗಿ ಅವರು ಮಾಹಿತಿ ಇತ್ತಿದ್ದಾರೆ.

- ಪುತ್ತರಿರ ಕರುಣ್ ಕಾಳಯ್ಯ