ಮಡಿಕೇರಿ, ಆ. ೩೦: ಭಾರತ ಸೇವಾದಳ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಸಂತ ಮೈಕಲರ ಶಾಲೆಯಲ್ಲಿ ಡಾ. ನಾ.ಸು ಹರ್ಡೀಕರ್ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟಕ ಜಿ.ಇ. ರೇವಣ್ಣ ಮಾತನಾಡಿ, ಭಾರತ ಸೇವಾದಳ ಸೇರಿದಂತೆ ಹಲವು ಸಮಾಜ ಮುಖಿ ಚಿಂತನೆಯ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ ಭಾರತ ಸೇವಾದಳ ಸಂಸ್ಥಾಪಕರಾದ ನಾ.ಸು. ಹರ್ಡೀಕರ್ ಅವರ ತತ್ವಾದರ್ಶಗಳನ್ನು ನಾವು ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಭಾರತ ಸೇವಾದಳ ಎಂದೊಡನೆ ನೆನಪಿಗೆ ಬರುವ ಹೆಸರೇ ಡಾ. ನಾರಾಯಣ್ ಸುಬ್ಬರಾವ್ ಹರ್ಡೀಕರ್, ಇವರು ಹಾವೇರಿ ಜಿಲ್ಲೆಯ ಹಾನಗಲ್ಲು ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ೧೮೮೯ನೇ ಮೇ ೭ ರಂದು ಸುಬ್ಬರಾವ್ ಹಾಗೂ ಯಮುನಬಾಯಿ ಅವರ ೭ನೇ ಪುತ್ರರಾಗಿ ಜನಿಸಿದರು ಎಂದು ಸ್ಮರಿಸಿದರು.

ಜಿಲ್ಲಾ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ, ಭಾ.ಸೇ.ದ ಸಂಘಟನ ಕೌಶಲ್ಯತೆಯನ್ನು, ದೇಶಾಭಿಮಾನ, ರಾಷ್ಟಿçÃಯತೆ ಹಾಗೂ ೧೯೨೪ರ ಬೆಳಗಾವಿ ಅಧಿವೇಶನದಲ್ಲಿ ಇವರ ಮುಂದಾಳತ್ವವನ್ನು ವಿಧಿವತ್ತಾದ, ಧ್ವಜವಂದನೆ ಹಾಗೂ ಸ್ವಯಂ ಸೇವಕರ ಶಿಸ್ತು, ಸಂಯಮದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸಂತ ಮೈಕಲರ ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮ ಸಿಸ್ಟರ್ ಮತ್ತು ಸಿಬ್ಬಂದಿ ವರ್ಗದವರಾದ ರಜೀನ, ಎಲಿಜಾ, ಕೇಶವ, ಶಿಕ್ಷಕರಾದ ಸುನಿತ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.