ಮಡಿಕೇರಿ, ಆ. ೩೦: ೨೩ನೇ ವರ್ಷದ ಚದುರಂಗ ಪಂದ್ಯಾಟ ಕೊಡಗು ವಿದ್ಯಾಲಯದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಚದುರಂಗ ತರಬೇತುದಾರರಾದ ಶಂಕರ್ ನಾರಾಯಣ ನೆರವೇರಿಸಿದರು.

ಕೊಡಗು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ೧೮ ಶಾಲೆಗಳಿಂದ ೧೨೬ ಆಟಗಾರರು ಪಾಲ್ಗೊಂಡಿದ್ದರು. ಈ ಪಂದ್ಯಾಟದಲ್ಲಿ ಪ್ರಾಥಮಿಕ ಶಾಲೆಯ ಬಾಲಕಿಯರ ವಿಭಾಗದಲ್ಲಿ ಸಂತ ಮೈಕಲರ ಶಾಲೆಯ ಲಿಪಿಕ್ಷಾ ಕೆ.ಆರ್. ಪ್ರಥಮ, ಸೈನಿಕ ಶಾಲೆಯ ತ್ರಿನಮ್ ಕೆ.ಆರ್. ದ್ವಿತೀಯ ಹಾಗೂ ಸ.ಮಾ.ಪ್ರಾ. ಶಾಲೆಯ ರಾಜೇಶ್ವರಿ ಎಸ್. ತೃತೀಯ ಸ್ಥಾನವನ್ನು ಪಡೆದರು. ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ಕುಶಾಲನಗರದ ಜ್ಞಾನಗಂಗಾ ಶಾಲೆಯ ಉನ್ನತ್ ಸಾರಥ್ಯ ಪ್ರಥಮ, ಕೊಡಗು ವಿದ್ಯಾಲಯದ ರುಶಿಲ್ ಎಂ. ದ್ವಿತೀಯ ಹಾಗೂ ಜ್ಞಾನಗಂಗಾ ಶಾಲೆಯ ಹಿತೇಸ್ ಎನ್.ಎಸ್. ತೃತೀಯ ಸ್ಥಾನ ಗಳಿಸಿರುತ್ತಾರೆ.

ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಶನಾರಾ ಚಂಗಪ್ಪ ಹಾಗೂ ಅಮೃತ ಬಿ.ಎಸ್. ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಸಂತ ಜೋಸೆಫರ ಶಾಲೆಯ ಬಹುಲ್ಯ ಕೆ.ಎಂ. ತೃತೀಯ ಸ್ಥಾನ ಗಳಿಸಿದರು.

ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಶಶಾಂಕ್ ನಾಣಯ್ಯ ಹಾಗೂ ಆಯುಷ್ ಆರ್. ಶೆಟ್ಟಿ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯ ಮುಶ್‌ಫಿಕ್ ಎಂ.ಎ. ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಮಂತ್ ಕೆ.ಎಸ್. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾಲೆಯ ಪ್ರಾಂಶುಪಾಲೆ ಸುಮಿತ್ರ ಕೆ.ಎಸ್. ಆಡಳಿತ ನಿರ್ವಹಣಾಧಿಕಾರಿ ರವಿ ಪಿ. ಉಪಸ್ಥಿತರಿದ್ದರು.