ಸೋಮವಾರಪೇಟೆ, ಆ. ೩೦: ಸಮೀಪದ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ನಡೆದ ಪ್ರೌಢಶಾಲಾ ವಿಭಾಗ ಎ. ವಲಯ ಮಟ್ಟದ ಅಥ್ಲೆಟಿಕ್ಸ್ ರಿಲೆ ಬಾಲಕಿಯರ ವಿಭಾಗದಲ್ಲಿ ಗೌಡಳ್ಳಿ ಬಿ.ಜಿ.ಎಸ್. ಶಾಲೆ ಪ್ರಥಮ, ಚೌಡ್ಲು ವಿಶ್ವಮಾನವ ಕುವೆಂಪು ದ್ವಿತೀಯ ಹಾಗೂ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆಯಿತು.
ಬಾಲಕರ ವಿಭಾಗದಲ್ಲಿ ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ (ಪ್ರ), ನೇರುಗಳಲೆ (ದ್ವಿ), ಎಸ್.ಜೆ.ಎಂ .ಸೋಮವಾರಪೇಟೆ (ತೃ) ಸ್ಥಾನ ಪಡೆಯಿತು. ೨೦೦ಮೀ ಬಾಲಕರ ಓಟದಲ್ಲಿ ಎಸ್ಜೆಎಂ ಶಾಲೆಯ ಹೇಮಂತ್ (ಪ್ರ), ಪಾಲಾಕ್ಷ (ದ್ವಿ), ಕುವೆಂಪು ಶಾಲೆಯ ಗೌತಮ್ (ತೃ), ಬಾಲಕಿಯರ ವಿಭಾಗದಲ್ಲಿ ಕುವೆಂಪು ಶಾಲೆಯ ರಹಸ್ಯ (ಪ್ರ), ಬಿಜಿಎಸ್ ಮೋಕ್ಷ (ದ್ವಿ), ಕುವೆಂಪು ಜೀವಿತ (ತೃ) ಸ್ಥಾನ ಪಡೆದರು.
೩೦೦೦ ಮೀ ಓಟದಲ್ಲಿ ಬಿ.ಜಿ.ಎಸ್. ನ ಹನಿ (ಪ್ರ), ಎಸ್.ಜೆ.ಎಂ. ಅಂಕಿತಾ (ದ್ವಿ), ಸ್ಥಾನ ಪಡೆದರು. ತಟ್ಟೆ ಎಸೆತದಲ್ಲಿ ಬಿ.ಜಿ.ಎಸ್. ನ ಡಿ.ಪಿ. ಮೊನಿಷಾ (ಪ್ರ), ನೇರುಗಳಲೆ ಇಂಪು (ದ್ವಿ), ಎಸ್.ಜೆ.ಎಂ. ಕುಮಾರಿ (ತೃ). ಬಾಲಕರ ವಿಭಾಗದಲ್ಲಿ ಗೋಣಿಮರೂರು ಶಾಲೆಯ ಉಲ್ಲಾಸ್ (ಪ್ರ), ಸೋಮವಾರಪೇಟೆ ಪ್ರೌಢಶಾಲೆಯ ದುಶ್ಯಂತ್ (ದ್ವಿ), ಅರ್ಜುನ್ ತೃತೀಯ ಸ್ಥಾನಕ್ಕೆ ಭಾಜನರಾದರು. ಭರ್ಜಿ ಎಸೆತದಲ್ಲಿ ನೇರುಗಳಲೆ ಶಾಲೆಯ ಸೀಮಾ (ಪ್ರ), ಸೋಮವಾರಪೇಟೆ ಶಾಲೆಯ ಸಂಜನಾ (ದ್ವಿ), ಕುವೆಂಪು ಶಾಲೆಯ ಜೀವಿತ (ತೃ), ಬಾಲಕರ ವಿಭಾಗದಲ್ಲಿ ನೇರುಗಳಲೆ ಅರ್ಜುನ್ಗೌಡ (ಪ್ರ), ಸಾಂದೀಪನಿ ಶಾಲೆಯ ಗುರುಪ್ರಸಾದ್ (ದ್ವಿ), ಸೋಮವಾರಪೇಟೆ (ತೃ) ಸ್ಥಾನ ಗಳಿಸಿದರು.