ಮುಳ್ಳೂರು, ಆ. ೩೦: ಆಧುನಿಕ ಅಭಿವೃದ್ದಿಯ ಹೆಸರಿನಲ್ಲಿ ಮರ ಗಿಡಗಳನ್ನು ಕಡಿಯುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇದರಿಂದ ಇಂದು ಪರಿಸರ ಸಮತೋಲನ ಕಳೆದುಕೊಳ್ಳಲು ಕಾರಣವಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅಭಿಪ್ರಾಯಪಟ್ಟರು.
ಅವರು ಸಮೀಪದ ಆಲೂರು ಸಿದ್ದಾಪುರ ಸರಕಾರಿ ಪ.ಪೂ. ಕಾಲೇಜು, ಪ್ರೌಢಶಾಲಾ ವಿಭಾಗ ಹಾಗೂ ರಾಷ್ಟಿçÃಯ ಸೇವಾ ಯೋಜನೆ ಘಟಕ, ವನಸಿರಿ ಇಕೋ ಕ್ಲಬ್ ಮತ್ತು ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಇಲಾಖೆಯ ಸಸ್ಯಶ್ಯಾಮಲ ಮತ್ತು ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಮತ್ತು ಪರಿಸರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ನಾಶದಿಂದ ಹವಾಗುಣವು ಬದಲಾಗುತ್ತಿದ್ದು ಈ ದಿಸೆಯಲ್ಲಿ ಪ್ರತಿಯೊಬ್ಬರು ಮರಗಿಡಗಳನ್ನು ಬೆಳೆಸಬೇಕು ವಿದ್ಯಾರ್ಥಿಗಳಲ್ಲಿ ಪರಿಸರ, ಅರಣ್ಯದ ಬಗ್ಗೆ ಕಾಳಜಿ ಇರಬೇಕೆಂದರು.
ಹಿರಿಯ ಉಪನ್ಯಾಸಕ ಗಣಪತಿ ಭಟ್ ಮಾತನಾಡಿ-ಇಂದಿನ ಆಧುನಿಕ ಭರಾಟೆಯಲ್ಲಿ ಅಂರ್ತಜಾಲ ಅಭಿವೃದ್ದಿಯಾಗುತ್ತಿದ್ದರೆ ಪರಿಸರದಲ್ಲಿ ಅಂರ್ತಜಲ ಪ್ರಮಾಣ ಕುಸಿಯುತ್ತಿದೆ ಇದಕ್ಕೆಲ್ಲಾ ಪರಿಸರದ ಮೇಲೆ ಆಗುತ್ತಿರುವ ಶೋಷಣೆಯೆ ಕಾರಣವಾಗಿದ್ದು ಈ ನಿಟ್ಟಿನಲ್ಲಿ ಎಲ್ಲಾರು ಮರಗಿಡಗಳನ್ನು ಬೆಳೆಸಲು ಪಣತೊಡಬೇಕೆಂದು ಸಲಹೆ ನೀಡಿದರು.
ಪರಿಸರ ಉಳಿವು ಶಿಕ್ಷಣ ಇಲಾಖೆಯ ಸಸ್ಯಶ್ಯಾಮಲ ಯೋಜನೆ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ.ಪೂ.ಕಾಲೇಜು ಪ್ರಾಂಶುಪಾಲ ಕೆ.ಎಂ.ಚAದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ, ಉಪನ್ಯಾಸಕಿ ರಾಘವಿ, ಶಿಕ್ಷಕರಾದ ಎ.ಎಸ್. ಶ್ರುತಿ, ಶಿವ ಕುಮಾರ್, ಜವರಯ್ಯ, ಮಂಜಯ್ಯ ಮುಂತಾದವರು ಹಾಜರಿದ್ದರು.