ವೀರಾಜಪೇಟೆ, ಆ. ೩೧ : ಕಾರು ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ನಡುವೆ ಅಪಘಾತ ಸಂಭವಿಸಿ ಕಾರು ಮಾಲೀಕರು ಪರಿಹಾರಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪರಿಹಾರದ ಹಣ ವಿಳಂಬವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಸರ್ಕಾರಿ ಬಸ್ ಜಪ್ತಿ ಮಾಡುವಂತೆ ಮಹತ್ವದ ಆದೇಶ ನೀಡಿದ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕೆ.ಎಸ್.ಆರ್.ಟಿ.ಸಿ. ಡೀಪೊಗೆ ಸೇರಿದ (ಕೆ.ಎ.೫೭-ಎಫ್- ೪೫೨೭) ಬಸ್ ಅನ್ನು ವೀರಾಜಪೇಟೆಯಲ್ಲಿ ಜಪ್ತಿ ಮಾಡಲಾಗಿದೆ.

ವೀರಾಜಪೇಟೆ ನಗರದ ಸುಣ್ಣದ ಬೀದಿ ನಿವಾಸಿ ವ್ಯಾಪಾರಿ ಮುನವರ್ ಮನ್ನಾ ಹಾಗೂ ಅವರ ಪತ್ನಿ ಫಾತೀಮ ಅಪ್ಸರ್ ತಮ್ಮ ಎರಡು ಮಕ್ಕಳೊಂದಿಗೆ ವೀರಾಜಪೇಟೆ ನಗರದಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಹುಣುಸೂರು ಕಲ್ಲಬೆಟ್ಟ ಜಂಕ್ಷನ್ ತಿರುವಿನ ಎದುರಿನಿಂದ ಬಂದÀ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿಪಡಿಸಿತ್ತು. ಪರಿಣಾಮ ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡು ವಾಹನ ಜಖಂಗೊAಡಿತ್ತು. ಮುನುವರ್ ಅವರ ಕುಟುಂಬ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ೨೦೧೦ರಲ್ಲಿ ಮುನುವರ್ ಪತ್ನಿ ಫಾತೀಮ ಅವರು ವೀರಾಜಪೇಟೆಯ ನ್ಯಾಯಾಲಯಕ್ಕೆ ಕಾರು ಜಖಂಗೊAಡ ಕಾರಣ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯವು ವಾದ ವಿವಾದಗಳನ್ನು ಆಲಿಸಿ ೨೦೨೦ರಲ್ಲಿ ಜಖಂಗೊAಡಿರುವ ವಾಹನಕ್ಕೆ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ನ್ಯಾಯಾಲಯದ ತೀರ್ಪುನ್ನು ಮರು ಪರಿಶೀಲನೆ ಮಾಡುವಂತೆ ಸಾರಿಗೆ ಸಂಸ್ಥೆಯು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ರಾಜ್ಯ ಉಚ್ಚ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯವು ನೀಡಿರುವ ತೀರ್ಪನ್ನು ಎತ್ತಿ ಹಿಡಿದಿತ್ತು. ನ್ಯಾಯಾಲಯವು ಹಲವು ಬಾರಿ ಸಾರಿಗೆ ಸಂಸ್ಥೆಗೆ ನೋಟೀಸು ಜಾರಿ ಮಾಡಿದರೂ ಸಾರಿಗೆ ಸಂಸ್ಥೆಯಿAದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ನ್ಯಾಯಾಲಯವು ೦೨-೦೩-೨೦೨೧ ರಲ್ಲಿ ಮೋಟಾರ್ ವಾಹನ ಕಾಯ್ದೆ ಅನ್ವಯ ಫಾತೀಮ ಕುಟುಂಬಕ್ಕೆ ೧,೪೮,೧೩೦ ರೂ. ಪರಿಹಾರ ಹಣ ನೀಡುವಂತೆ ಅದೇಶ ಮಾಡಿತ್ತು. ಸಾರಿಗೆ ಸಂಸ್ಥೆಯಿAದ ಪರಿಹಾರ ಹಣ ವಿಳಂಬವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಾಹನ ಜಪ್ತಿ ಮಾಡುವಂತೆ ಅದೇಶ ಮಾಡಿತ್ತು. ಇಂದು ಮಧ್ಯಾಹ್ನದ ವೇಳೆ ವೀರಾಜಪೇಟೆ ನಗರಕ್ಕೆ ಆಗಮಿಸಿದ ಬಸನ್ನು ನ್ಯಾಯಾಲಯದ ಹಿರಿಯ ಅಮೀನಾಗಳಾದ ಸ್ಟೀಫನ್ ಡಿಸೋಜಾ, ಬಿ.ಕೆ. ಕುಂಞಪ್ಪ ಹರೀಶ್, ಸಂತೋಷ್, ರಮೇಶ್ ಅವರುಗಳು ನ್ಯಾಯಾಲಯದ ಜಪ್ತಿ ಆದೇಶದೊಂದಿಗೆ ಸರ್ಕಾರಿ ಬಸ್ ನಿಲ್ದಾಣಕ್ಕೆ ತೆರಳಿ ಸರ್ಕಾರಿ ಬಸನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಅರ್ಜಿದಾರರ ಪರವಾಗಿ ವಕೀಲರಾದ ಟಿ.ಪಿ. ಕೃಷ್ಣ, ವಿ.ಜಿ. ರಾಕೇಶ್ ಮತ್ತು ಸಿ. ದರ್ಶನ್ ಕುಮಾರ್ ವಾದ ಮಂಡಿಸಿದರು.