ಸೋಮವಾರಪೇಟೆ, ಆ. ೨೯: ಸಾರ್ವಜನಿಕ ಶಿಕ್ಷಣ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದೈಹಿಕ ಶಿಕ್ಷಣ ವಿಭಾಗ ಆಶ್ರಯದಲ್ಲಿ ೨೦೨೩-೨೪ನೇ ಸಾಲಿನ ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನದಲ್ಲಿ ಸೋಮವಾರಪೇಟೆ ಎ ವಲಯಮಟ್ಟದ ಕ್ರೀಡಾಕೂಟದ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಬಿಜಿಎಸ್ ಗೌಡಳ್ಳಿ ಪ್ರಥಮ ಮತ್ತು ಸೋಮವಾರಪೇಟೆ ಎಸ್‌ಜೆಎಂ ದ್ವಿತೀಯ ಸ್ಥಾನ ಪಡೆದಿದೆ.
ವಾಲಿಬಾಲ್‌ನಲ್ಲಿ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ(ಪ್ರ) ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ(ದ್ವಿ) ಸ್ಥಾನ ಪಡೆಯಿತು. ಥ್ರೋಬಾಲ್‌ನಲ್ಲಿ ಎಸ್‌ಜೆಎಂ ಸೋಮವಾರಪೇಟೆ (ಪ್ರ), ನೇರುಗಳಲೆ ಸರ್ಕಾರಿ ಪ್ರೌಢಶಾಲೆ(ದ್ವಿ) ಸ್ಥಾನ ಪಡೆದಿದೆ.
ಖೋ-ಖೋನಲ್ಲಿ ಸೋಮವಾರಪೇಟೆ ಎಸ್‌ಜೆಎಂ (ಪ್ರ), ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ (ದ್ವಿ) ಸ್ಥಾನ ಪಡೆದಿದೆ. ಹಾಕಿಯಲ್ಲಿ ಸೋಮವಾರಪೇಟೆ ಎಸ್‌ಜೆಎಂ (ಪ್ರ) ಸ್ಥಾನ ಪಡೆದಿದೆ. ಬಾಲ್ ಬ್ಯಾಡ್‌ಮಿಂಟನ್‌ನಲ್ಲಿ ನೇರುಗಳಲೆ ಸರ್ಕಾರಿ ಪ್ರೌಢಶಾಲೆ (ಪ್ರ) ಸ್ಥಾನ ಪಡೆಯಿತು.
ಹ್ಯಾಂಡ್ ಬಾಲ್‌ನಲ್ಲಿ ಗೌಡಳ್ಳಿ ಬಿಜಿಎಸ್ (ಪ್ರ) ಸ್ಥಾನ ಪಡೆಯಿತು. ಟೇಬಲ್ ಟೆನ್ನಿಸ್‌ನಲ್ಲಿ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ (ಪ್ರ) ಸ್ಥಾನ ಪಡೆಯಿತು. ಫುಟ್‌ಬಾಲ್‌ನಲ್ಲಿ ಗೌಡಳ್ಳಿಯ ಬಿಜಿಎಸ್ (ಪ್ರ) ಸ್ಥಾನ ಪಡೆಯಿತು.
ಬಾಲಕರ ವಿಭಾಗದ ಕಬಡ್ಡಿಯಲ್ಲಿ ಸೋಮವಾರಪೇಟೆ ಎಸ್‌ಜೆಎಂ (ಪ್ರ), ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ (ದ್ವಿ) ಸ್ಥಾನ ಪಡೆಯಿತು. ವಾಲಿಬಾಲ್‌ನಲ್ಲಿ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ (ಪ್ರ), ಮಸಗೋಡು ಚೆನ್ನಮ್ಮ ಶಾಲೆ (ದ್ವಿ) ಸ್ಥಾನ ಪಡೆಯಿತು. ಥ್ರೋಬಾಲ್‌ನಲ್ಲಿ ನೇರುಗಳಲೆ ಸರ್ಕಾರಿ ಪ್ರೌಢಶಾಲೆ (ಪ್ರ), ಮಸಗೋಡು ಚೆನ್ನಮ್ಮ ಶಾಲೆ (ದ್ವಿ) ಸ್ಥಾನ ಪಡೆಯಿತು. ಖೋಖೋ ಸ್ಪರ್ಧೆಯಲ್ಲಿ ಸೋಮವಾರಪೇಟೆ ಎಸ್‌ಜೆಎಂ (ಪ್ರ), ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ (ದ್ವಿ) ಸ್ಥಾನ ಪಡೆಯಿತು. ಹಾಕಿ ಸಾಂದೀಪಿನಿ ಆಂಗ್ಲ ಮಾಧ್ಯಮ ಶಾಲೆ (ಪ್ರ) ಸ್ಥಾನ ಪಡೆಯಿತು. ಬಾಲ್ ಬ್ಯಾಡ್‌ಮಿಂಟನ್ ನೇರುಗಳಲೆ ಸರ್ಕಾರಿ ಪ್ರೌಢಶಾಲೆ (ಪ್ರ) ಹಾಗೂ ಗೋಣಿಮರೂರು ಸರ್ಕಾರಿ ಪ್ರೌಢಶಾಲೆ (ದ್ವಿ) ಸ್ಥಾನ ಪಡೆಯಿತು. ಹ್ಯಾಂಡ್ ಬಾಲ್ ಗೌಡಳ್ಳಿ ಬಿಜಿಎಸ್ ಪ್ರೌಢಶಾಲೆ (ಪ್ರ) ಸ್ಥಾನ ಪಡೆಯಿತು.
ಟೇಬಲ್ ಟೆನ್ನಿಸ್ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ (ಪ್ರ) ಸ್ಥಾನ ಪಡೆಯಿತು. ಫುಟ್‌ಬಾಲ್‌ನಲ್ಲಿ ಗೌಡಳ್ಳಿಯ ಬಿಜಿಎಸ್ (ಪ್ರ), ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ (ದ್ವಿ) ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.