ಮಡಿಕೇರಿ, ಆ. ೨೯: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ವತಿಯಿಂದ ‘ಭವಿಷ್ಯ ನಿಧಿ ನಿಮ್ಮ ಹತ್ತಿರ ೨.೦’ರ ಅಡಿಯಲ್ಲಿ ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮವು ಬೇಟೋಳಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಪ್ರವರ್ತನ ಅಧಿಕಾರಿ, ಜಿಲ್ಲಾ ನೋಡಲ್ ಅಧಿಕಾರಿ ಬಿ.ಎನ್. ರಮೇಶ್ ಮತ್ತು ಎಸ್‌ಎಸ್‌ಎ, ಸಹ ಉದ್ಯೋಗದಾತರಾಗಿರುವ ಕೆ. ರಮೇಶ್, ಉದ್ಯೋಗಿಗಳು ಮತ್ತು ಪಿಂಚಣಿದಾರರು ಕುಂದುಕೊರತೆಗಳ ಪರಿಹಾರ ಮತ್ತು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಇ.ಪಿ.ಎಫ್.ಓ. ಉದ್ಯೋಗದಾತರು, ಉದ್ಯೋಗಿಗಳು ಮತ್ತು ಪಿಂಚಣಿದಾರರು ತಮ್ಮ ಪ್ರಶ್ನೆಗಳು ಮತ್ತು ಕುಂದುಕೊರತೆಗಳ ಬಗ್ಗೆ ತಿಳಿಸಿದರು. ಅವುಗಳನ್ನು ಸ್ಥಳದಲ್ಲೇ ಆಲಿಸಿ ಪರಿಹರಿಸಲಾಯಿತು.

ಈ ಸಂದರ್ಭ ಬೇಟೋಳಿ ವಿಎಸ್‌ಎಸ್‌ಎನ್ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಇಂದಿರಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಣಿ ಉಪಸ್ಥಿತರಿದ್ದರು.