ಸುಂಟಿಕೊಪ್ಪ, ಆ. ೩೦: ಮಕ್ಕಳಿಗೆ ವಿದ್ಯೆ, ಸಂಸ್ಕಾರ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವ ಪ್ರತಿಯೊಬ್ಬರು ಶಿಕ್ಷಕರನ್ನು ನೆನಪಿಸುತ್ತಾರೆ ಎಂದು ಸಂತ ಅಂತೋಣಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಹೇಳಿದರು.
ಸಂತ ಅಂತೋಣಿ ಪ್ರಾಥಮಿಕ ಶಾಲೆಯ ೧೯೮೦ ಸಾಲಿನ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲೆಯಲ್ಲಿ ಬಾಲಂಗೋಚಿ ‘ಹಬ್ಬ’ ಕಾರ್ಯಕ್ರಮ ವನ್ನು ಶಾಲಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿವೃತ್ತರಾಗಿ ೨೦ ವರ್ಷ ಕಳೆದ ನಂತರ ದೂರದ ತುಮಕೂರಿನಿಂದ ತನ್ನನು ಕರೆಯಿಸಿ ಸನ್ಮಾನಿಸಿದ್ದು ಸಂತಸ ತಂದಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಕರ್ತವ್ಯ ವಾದರೂ ಅವರನ್ನು ತಿದ್ದಿ ತೀಡಿ ಬೆಳೆಸುವುದು ಸಾಮಾನ್ಯದ ಕೆಲಸವಲ್ಲ ಎಂದು ಹೇಳಿದರು. ಸಂತ ಅಂತೋಣಿ ಪ್ರಾಥಮಿಕ ಶಾಳೆಯ ಮುಖ್ಯೋಪಾಧ್ಯಾಯಿನಿ ವೀರಾ ಡಿಸೋಜ ಮಾತನಾಡಿ, ಹಳೆ ವಿದ್ಯಾರ್ಥಿಗಳು ಈ ಶಾಲೆಯ ಮೇಲಿನ ಅಭಿಮಾನದಿಂದ ಹಾಗೂ ಸಿಸ್ರ್ಸ್ಗಳ, ಶಿಕ್ಷಕರ ಮೇಲಿನ ಪ್ರೀತಿಯಿಂದ ಈ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸ ತಂದಿದೆ. ಒಂದು ಸಂಸ್ಥೆ ನಡೆಸುವುದು ಎಷ್ಟು ಕಷ್ಟವಿದೆ ಎಂದು ನಿಮಗೆಲ್ಲರಿಗೂ ಅರಿವು ಆಗಿದೆ. ಜ್ಞಾನ ಸುಂಟಿಕೊಪ್ಪ, ಆ. ೩೦: ಮಕ್ಕಳಿಗೆ ವಿದ್ಯೆ, ಸಂಸ್ಕಾರ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವ ಪ್ರತಿಯೊಬ್ಬರು ಶಿಕ್ಷಕರನ್ನು ನೆನಪಿಸುತ್ತಾರೆ ಎಂದು ಸಂತ ಅಂತೋಣಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಹೇಳಿದರು.
ಸಂತ ಅಂತೋಣಿ ಪ್ರಾಥಮಿಕ ಶಾಲೆಯ ೧೯೮೦ ಸಾಲಿನ ಹಳೆಯ ವಿದ್ಯಾರ್ಥಿಗಳು ಸೇರಿ ಶಾಲೆಯಲ್ಲಿ ಬಾಲಂಗೋಚಿ ‘ಹಬ್ಬ’ ಕಾರ್ಯಕ್ರಮ ವನ್ನು ಶಾಲಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿವೃತ್ತರಾಗಿ ೨೦ ವರ್ಷ ಕಳೆದ ನಂತರ ದೂರದ ತುಮಕೂರಿನಿಂದ ತನ್ನನು ಕರೆಯಿಸಿ ಸನ್ಮಾನಿಸಿದ್ದು ಸಂತಸ ತಂದಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಕರ್ತವ್ಯ ವಾದರೂ ಅವರನ್ನು ತಿದ್ದಿ ತೀಡಿ ಬೆಳೆಸುವುದು ಸಾಮಾನ್ಯದ ಕೆಲಸವಲ್ಲ ಎಂದು ಹೇಳಿದರು. ಸಂತ ಅಂತೋಣಿ ಪ್ರಾಥಮಿಕ ಶಾಳೆಯ ಮುಖ್ಯೋಪಾಧ್ಯಾಯಿನಿ ವೀರಾ ಡಿಸೋಜ ಮಾತನಾಡಿ, ಹಳೆ ವಿದ್ಯಾರ್ಥಿಗಳು ಈ ಶಾಲೆಯ ಮೇಲಿನ ಅಭಿಮಾನದಿಂದ ಹಾಗೂ ಸಿಸ್ರ್ಸ್ಗಳ, ಶಿಕ್ಷಕರ ಮೇಲಿನ ಪ್ರೀತಿಯಿಂದ ಈ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸ ತಂದಿದೆ. ಒಂದು ಸಂಸ್ಥೆ ನಡೆಸುವುದು ಎಷ್ಟು ಕಷ್ಟವಿದೆ ಎಂದು ನಿಮಗೆಲ್ಲರಿಗೂ ಅರಿವು ಆಗಿದೆ. ಜ್ಞಾನ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ ನನ್ನ ಅಧಿಕಾರಾವಧಿಯಲ್ಲಿ ಈ ಶಾಲೆಗೆ ನನ್ನಿಂದ ಆಗುವ ಸಹಾಯ ನೀಡಿದ್ದೇನೆ ಈ ಶಾಲೆಯಲ್ಲಿ ನಮಗೆ ವಿದ್ಯೆ ಸಂಸ್ಕಾರ ನೀಡಿದ ಶಿಕ್ಷಕರು ನಮ್ಮ ಜೀವನದಲ್ಲಿ ಅಪಾರ ಪ್ರಭಾವ ಬೀರಿದರು ಎಂದು ನೆನಪಿಸಿ ಕೊಂಡರು. ಈ ಸಂದರ್ಭ ನಿವೃತ್ತ ಹಿರಿಯ ಶಿಕ್ಷಕಿ ವಸಂತಿ, ನಿವೃತ್ತ ಹಿರಿಯ ಶಿಕ್ಷಕಿ ವೈಲೆಟ್ ಮೇನೆಜೆಸ್ ಹಾಗೂ ಶಾಲಾ ಮುಖ್ಯೋಪಾ ಧ್ಯಾಯಿನಿ ವೀರಾ ಡಿಸೋಜ ಅವರನ್ನು ಸನ್ಮಾನಿಸಿ, ಗೌರವಿಸಿದರು. ಫೆಲ್ಸಿ, ಜರಿನ, ಮಾಗ್ದಲಿನ್ ತಂಡ ದವರು ಪ್ರಾರ್ಥಿಸಿ, ಶೋಭಾವತಿ ಸ್ವಾಗತಿಸಿ, ಸಮಾದ್ ನಿರೂಪಿಸಿ, ಗ್ಯಾಬ್ರಿಯಲ್ ಡಿಸೋಜ ವಂದಿಸಿದರು.