ಶ್ರೀಮಂಗಲ ಆ. ೨೯: ಜಿಲ್ಲೆ ಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಸಾಮೂಹಿಕ ನಾಯಕತ್ವದ ಕೊಡಗು ಜಿಲ್ಲಾ ರೈತ ಸಂಘ -ಹಸೀರು ಸೇನೆ ಘಟಕ ಸರ್ಕಾರವನ್ನು ಒತ್ತಾಯಿಸಿದೆ. ಶ್ರೀಮಂಗಲ ಪ್ರವಾಸಿ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ರೈತ ಸಂಘದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಅವರು ಆಗ್ರಹಿಸಿದರು
ಕಾಡಾನೆ-ಮಾನವ ಸಂಘರ್ಷ, ಇತರ ವನ್ಯ ಜೀವಿ ಹಾವಳಿಯ ಬಗ್ಗೆ ರೈತರಿಗೆ ಉಂಟಾಗುತ್ತಿರುವ ಮಾನವ ಜೀವ ಹಾನಿ, ಬೆಳೆ ಹಾನಿ ತಡೆಗೆ ಸರಕಾರ ಶಾಶ್ವತ ಪರಿಹಾರಕ್ಕೆ ಯೋಜನೆ ಜಾರಿಗೆ ತರಬೇಕು. ವನ್ಯ ಪ್ರಾಣಿಗಳಿಂದ ಬೆಳೆನಷ್ಟದೊಂದಿಗೆ ಮಳೆ ಇಲ್ಲದೆ ಬರ ಪರಿಸ್ಥಿತಿ ಪ್ರಸಕ್ತ ವರ್ಷ ಎದುರಿಸುತ್ತಿದ್ದು ಇದರ ಬಗ್ಗೆ ಸಮಾಲೋಚನೆ ಮಾಡಿ ಮುಂದಿನ ದಿನಗಳಲ್ಲಿ ಸರಕಾರಕದ ಗಮನ ಸೆಳೆಯುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತ ಸಂಘದ ಪ್ರಮು ಖರಾದ ಕಳ್ಳಿಚಂಡ ಧನು, ಮಚ್ಚ ಮಾಡ ರಂಜಿ, ಮಾಯಣಮಾಡ ಮೋಹನ್, ಬೊಟ್ಟಂಗಡ ಗಿರೀಶ್, ಚಂಗುಲAಡ ರಾಜಪ್ಪ, ಅಯ್ಯಮಾಡ ಹ್ಯಾರಿ, ತಿಮ್ಮರಾಯ ಶೆಟ್ಟಿ, ಶಿವಚಾರರ ಲೋಕೇಶ್, ಪೆಮ್ಮಂಡ ನರೇಶ್ ಹಾಜರಿದ್ದರು.
ಕಾಫಿ ಬೆಳೆಗಾರರ ಸಂಘ ಒತ್ತಾಯ
ಸೋಮವಾರಪೇಟೆ: ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಸರಕಾರವನ್ನು ಒತ್ತಾಯಿಸಿದೆ.
ಈ ಕುರಿತು ಸೋಮವಾರ ದಂದು ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಮಾತನಾಡಿ, ೨೦೧೭ರಿಂದ ಪ್ರಸಕ್ತ ಸಾಲಿನವರೆಗೂ ಕಾಫಿ ಬೆಳೆಗಾರರು ನಿರಂತರವಾಗಿ ಬೆಳೆ ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಸರಕಾರಗಳು ಕಾಫಿ ಬೆಳೆಗಾರರ ಹಿತವನ್ನು ಕಾಯಲು ಮುಂದಾಗು ತ್ತಿಲ್ಲ. ಜೂನ್‌ನಲ್ಲಿ ಕಾಫಿಗೆ ಹೂ ಮಳೆ ಆಗಲಿಲ್ಲ. ಜುಲೈನಲ್ಲಿ ವಿಪರೀತ ಮಳೆ ಕಾರಣದಿಂದ ಕಾಫಿ ಬೀಜ ಉದು ರಲು ಪ್ರಾರಂಭವಾಯಿತು. ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆ ಬಾರದೆ ಇದೀಗ ಬೆಳೆಗಾರನ ಪರಿಸ್ಥಿತಿ ಶೋಚನೀಯವಾಗಿದೆ. ಅತಿವೃಷ್ಠಿ ಯಿಂದ ಪರಿಹಾರವೂ ಸಮರ್ಪ ಕವಾಗಿ ಸಿಗದೆ ಇರುವುದರಿಂದ ಬೆಳೆಗಾರ ಆರ್ಥಿಕ ಸಂಕಷ್ಟ ವನ್ನು ಎದುರಿಸುವಂತಾಗಿದೆ.
ಸೋಮವಾರಪೇಟೆ ತಾಲೂಕಿ ನಲ್ಲಿ ಅರೇಬಿಕಾ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಳೆಗಾರರ ಬದುಕು ಹಸನಾಗಬೇಕಾದರೆ ಸರಕಾರ ಅರೇಬಿಕಾ ವಿಶೇಷ ವಲಯ ಎಂದು ಘೋಷಣೆ ಮಾಡುವುದರೊಂದಿಗೆ ಬೆಳೆಯ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಫಸಲು ಸಾಲ ಮನ್ನಾ ಮಾಡಲಿ: ಕಾರ್ಮಿಕರ ಕೊರತೆ, ಗೊಬ್ಬರಗಳ ಬೆಲೆ ಏರಿಕೆ ಮತ್ತಿತರ ಕಾರಣಗಳಿಂದ ೨೦೨೨-೨೩ನೇ ಸಾಲಿನಲ್ಲಿ ಬೆಳೆಗಾರರು ಸಹಕಾರ ಸಂಘಗಳು ಹಾಗೂ ರಾಷ್ಟಿçà ಕೃತ ಬ್ಯಾಂಕ್‌ಗಳಿAದ ಪಡೆದ ಫಸಲು ಸಾಲವನ್ನು ಮನ್ನಾ ಮಾಡಲೇ ಬೇಕೆಂದು ಸಂಘದ ಉಪಾಧ್ಯಕ್ಷ ಬಿ.ಎಂ. ಲವ ಸರಕಾರವನ್ನು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ತಾಕೇರಿ ಪ್ರಕಾಶ್, ಪದಾಧಿಕಾರಿಗಳಾದ ಕೆ.ಬಿ.ಬಸಪ್ಪ, ಬಿ.ಎಸ್. ಅನಂತ ರಾಮ್, ಎಸ್.ಎನ್ ಸೋಮಶೇಖರ್ ಇದ್ದರು.