ನಾಪೋಕ್ಲು, ಆ. ೨೯: ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಪೌಳಿ ಉದ್ಘಾಟನಾ ಸಮಾರಂಭ ತಾ.೩೦ರಂದು (ಇಂದು) ನಡೆಯಲಿದ್ದು, ಪೌಳಿ ಉದ್ಘಾಟನೆಯ ಅಂಗವಾಗಿ ಮಂಗಳವಾರ ಸಂಜೆ ಆಶ್ಲೇಷ ಬಲಿ, ವಾಸ್ತು ಹೋಮ ,ಸುದರ್ಶನ ಹೋಮ, ವಾಸ್ತು ಬಲಿ ನಡೆಯಿತು.
ಇಂದು ಬೆಳಿಗ್ಗೆ ೫ ಗಂಟೆಗೆ ಲಕ್ಷಿö್ಮ ಗಣಪತಿ ಹೋಮ, ರುದ್ರಾಭಿಷೇಕ, ಶತಾರುದ್ರಾಭಿಷೇಕ, ರುದ್ರ ಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆಯಲಿದೆ. ೧೦.೩೦ ಕ್ಕೆ ಪೌಳಿ ಉದ್ಘಾಟನೆ ನೆರವೇರಲಿದ್ದು ಬಳಿಕ ತುಲಾಭಾರ ಸೇವೆ, ಮಹಾಮಂಗಳಾರತಿ, ದೇವರ ನೃತ್ಯ ಬಲಿ ನಡೆದು ಬಳಿಕ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ.
ಪೌಳಿ ಉದ್ಘಾಟನಾ ಸಮಾರಂಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ, ಮಾಜಿ ಸಂಸದ ಸಿ.ಎಸ್ ಪುಟ್ಟರಾಜು, ದಾನಿ ಹಾಗೂ ಮಾಜಿ ಸಂಸದ ಡಿ. ಕುಪೇಂದ್ರ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.