ಕುಶಾಲನಗರ, ಆ. ೨೯: ಕುಶಾಲನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯನ್ನು ಕೆಡವಿ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲು ಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಿ ಶಾಲೆಯ ಮೈದಾನದ ಗ್ಯಾಲರಿ ಹಿಂಭಾಗದಲ್ಲಿ ಅಳವಡಿಸಿರುವ ಕಾಂಪೌAಡ್ ಅನ್ನು ಕೆಡವಿ ಹಾನಿಗೊಳಿಸಿದಲ್ಲದೆ ಸರ್ಕಾರಿ ಜಾಗದಲ್ಲಿ ಜೆಸಿಬಿ ಯಂತ್ರ ಬಳಸಿ ಶೌಚಾಲಯ ಗುಂಡಿ ತೆಗೆದಿರುವುದು ಕಂಡು ಬಂದಿದೆ. ಈ ವ್ಯಾಪ್ತಿಯಲ್ಲಿ ನೆಟ್ಟು ಬೆಳೆಸಿದ ಗಿಡ ಮರಗಳನ್ನು ಕಿತ್ತುಹಾಕಿದ್ದು ಸಂಪೂರ್ಣ ಹಾನಿ ಮಾಡಿರುವ ದೃಶ್ಯ ಗೋಚರಿಸಿದೆ.
ಮಾಹಿತಿ ದೊರೆತ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಆವರಣ ಬೇಲಿಯನ್ನು ಸರಿಪಡಿಸಿ ಸರ್ಕಾರಿ ನಿಯಮದಂತೆ ಕಟ್ಟಡ ನಿರ್ಮಿಸಲು ಒತ್ತುವರಿ ಮಾಡಿದ ವ್ಯಕ್ತಿಗೆ ಸೂಚನೆ ನೀಡಿದ್ದಾರೆ. ತಪ್ಪಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗೆ ಸಂಬAಧಿಸಿದ ಜಾಗವನ್ನು ಒತ್ತುವರಿದಾರರಿಂದ ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಗಿಡ ಮರಗಳಿಗೆ ಹಾನಿ ಮಾಡಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. -ವರದಿ :ಚಂದ್ರಮೋಹನ್