ಸಿದ್ದಾಪುರ, ಆ. ೨೮: ಹೊರ ರಾಜ್ಯದ ಕಾರ್ಮಿಕನ ಪುತ್ರ ನಾಪತ್ತೆ ಯಾಗಿರುವ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರ ಸಮೀಪದ ಅಮ್ಮತ್ತಿಯ ಕಾಫಿ ತೋಟ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಅಸ್ಸಾಂ ರಾಜ್ಯದ ಕಾರ್ಮಿಕ ಜಮೀರ್ ಅಲಿ ಎಂಬವರ ಮಗ ೧೪ ವರ್ಷ ಪ್ರಾಯದ ರಂಜಾನ್ ಅಲಿ ಆಗಸ್ಟ್ ೧೩ ರಂದು ಭಾನುವಾರ ಬೆಳಿಗ್ಗೆ ಅಮ್ಮತ್ತಿಯಿಂದ ಬಸ್ಸಿನಲ್ಲಿ ಸಿದ್ದಾಪುರ ಸಂತೆಗೆ ಬಂದಿದ್ದು, ಬಳಿಕ ಅಮ್ಮತ್ತಿಗೆ ಮರಳದೆ ಸಿದ್ದಾಪುರದಿಂದ ನಾಪತ್ತೆಯಾಗಿದ್ದಾನೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ಸಿಕ್ಕಿದ್ದಲ್ಲಿ ಸಿದ್ದಾಪುರ ಪೊಲೀಸರನ್ನು ಸಂಪರ್ಕಿಸು ವಂತೆ ಪೊಲೀಸರು ಕೋರಿದ್ದಾರೆ.