ಸಿದ್ದಾಪುರ, ಆ. ೨೮ : ಸಲಗವೊಂದು ಟ್ರಾö್ಯಕ್ಟರ್ ಮೇಲೆ ದಾಳಿ ನಡೆಸಿದ್ದು, ಸಮೀಪದಲ್ಲಿದ್ದ ಕಾರ್ಮಿಕರು ಪ್ರಾಣಪಾಯದಿಂದ ಪಾರಾದ ಘಟನೆ ಮೇಕೂರೂ ಹೊಸ್ಕೇರಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಕಾಫಿ ಬೆಳೆಗಾರರಾದ ಎಂ.ಎ ಗಣಪತಿ ಎಂಬವರ ಕಾಫಿ ತೋಟದ ಒಳಗೆ ಕಾರ್ಮಿಕರು ಸಂಜೆ ೪.೪೫ ರ ವೇಳೆ ಟ್ರಾö್ಯಕ್ಟರ್‌ನ ಟೈಲರ್‌ನಲ್ಲಿ ಸೌದೆಗಳನ್ನು ತುಂಬಿಸುತ್ತಿದ್ದ ಸಂದರ್ಭ ಏಕಾಏಕಿ ಸಲಗವೊಂದು ಟ್ರಾö್ಯಕ್ಟರ್‌ನ ಮೇಲೆ ದಾಳಿ ನಡೆಸಿದೆ.

ಈ ಸಂದರ್ಭ ಟ್ರಾö್ಯಕ್ಟರ್‌ನ ಹಿಂಭಾಗದಲ್ಲಿದ್ದ ಕಾರ್ಮಿಕರು ಆನೆಯನ್ನು ಕಂಡು ದಿಕ್ಕಾಪಾಲಾಗಿ ಓಡಿ ಕೂದಲೆಳೆಯ ಅಂತರದಿAದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾö್ಯಕ್ಟರ್‌ನ ಮುಂಭಾಗಕ್ಕೆ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ಗಣಪತಿಯವರ ಕಾಫಿ ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟು ದಾಂಧಲೆ ನಡೆಸಿದ್ದು ಕೃಷಿ ಫಸಲುಗಳನ್ನು ನಾಶ ಮಾಡಿವೆ. ಅಲ್ಲದೆ ತೋಟದ ಗೇಟ್‌ಗಳನ್ನು ತುಳಿದು ಹಾನಿಗೊಳಿಸಿದೆ ಎಂದು ಗಣಪತಿ ತಿಳಿಸಿದ್ದಾರೆ. -ವಾಸು