ಬೆಂಗಳೂರು, ಆ. ೨೮ : ನಿನ್ನೆಯಷ್ಟೇ ವಿಕ್ರಂ ಲ್ಯಾಂಡರ್‌ನಿAದ ಪಡೆಯಲಾದ ಚಂದ್ರ ಪದರದ ತಾಪಮಾನ ಮಾಹಿತಿಯನ್ನು ಬಿಡುಗಡೆಗೊಳಿಸಿದ ಇಸ್ರೋ, ಇಂದು ಚಂದ್ರನ ಮೇಲೆ ಸಂಚರಿಸುತ್ತಿರುವ ಪ್ರಗ್ಯಾನ್ ರೋವರ್ ಸೆರೆಹಿಡಿದಿರುವ ಚಿತ್ರಗಳನ್ನು ಬಿಡುಗಡೆಗೊಳಿಸಿದೆ. ರೋವರ್ ಮಾರ್ಗದಲ್ಲಿ ೪ ಮೀಟರ್ ಸುತ್ತಳತೆಯ ಗುಂಡಿಯೊAದು ಸಿಕ್ಕಿದ್ದು, ಇದನ್ನು ತಪ್ಪಿಸಿ ಬದಲಿ ಮಾರ್ಗದಲ್ಲಿ ಸುಲಭವಾಗಿ ರೋವರ್ ಚಲಿಸಿರುವ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.