ಮಡಿಕೇರಿ, ಆ. ೨೮: ಕೇಂದ್ರ ಮೌಲ್ಯಮಾಪನ ಸಮಿತಿಯ ನಿರ್ದೇಶನದನ್ವಯ ಪೊನ್ನಂಪೇಟೆ ಉಪನೋಂದಣಿ ಕಚೇರಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಮಾರುಕಟ್ಟೆ ಬೆಲೆಯನ್ನು ೨೦೨೩-೨೪ ನೇ ಸಾಲಿಗೆ ಪರಿಷ್ಕರಿಸಲು ತಾಲೂಕು ಉಪ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ ೧೬ ರಂದು ಪೊನ್ನಂಪೇಟೆ ತಹಶೀಲ್ದಾರ್ ಅವರ ಕಾರ್ಯಾಲಯದಲ್ಲಿ ಉಪ ಸಮಿತಿಯ ಸದಸ್ಯರು, ಕಾರ್ಯದರ್ಶಿಗಳು ಒಳಗೊಂಡAತೆ ಎಲ್ಲಾ ಸದಸ್ಯರು ಹಾಜರಾಗಿ ಚರ್ಚಿಸಿ ಅಂಕಿ ಅಂಶಗಳ ಆಧಾರದ ಮೇಲೆ ಗ್ರಾಮವಾರು ಕನಿಷ್ಟ ಶೇ. ೩೦ ರಿಂದ ಗರಿಷ್ಠ ೩೫ ರವರೆಗೆ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಲು ತೀರ್ಮಾನಿಸಿದ್ದು, ಪರಿಷ್ಕರಿಸಿರುವ ಮಾರುಕಟ್ಟೆ ಬೆಲೆ ಪಟ್ಟಿಯನ್ನು ಉಪ ನೋಂದಣಿ ಕಚೇರಿ, ಪೊನ್ನಂಪೇಟೆಯಲ್ಲಿ ನೋಟೀಸ್ ಬೋರ್ಡ್ನಲ್ಲಿ ಪ್ರದರ್ಶಿಸಿದ್ದು, ಈ ವಿಷಯದ ಕುರಿತು ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆ ಇದ್ದಲ್ಲಿ ೧೫ ದಿವಸದೊಳಗೆ ಉಪನೋಂದಣಿ ಕಚೇರಿಗೆ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ಪೊನ್ನಂಪೇಟೆ ಉಪ ನೋಂದಣಾಧಿಕಾರಿ ಅವರು ತಿಳಿಸಿದ್ದಾರೆ.