ವೀರಾಜಪೇಟೆ, ಆ. ೨೭: ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದ ರೀತಿಯಲ್ಲಿ ಸರಕಾರಿ ವೈದ್ಯರುಗಳು ಕೆಲಸ ನಿರ್ವಹಿಸಬೇಕು ಎಂದು ವೀರಾಜ ಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳಿಗೆ ಸೂಚಿಸಿದರು.

ರಕ್ಷಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ವಿರುದ್ಧ ಹಲವಾರು ದೂರುಗಳು ಬಂದಿವೆ. ಅದರಲ್ಲೂ ವೈದ್ಯರ ನಿರ್ಲಕ್ಷö್ಯತನ, ಸಮಯ ಪಾಲನೆ, ವೈದ್ಯರ ಅಲಭ್ಯತೆ, ಅಶುಚಿತ್ವ, ಸಿಬ್ಬಂದಿಗಳ ಉದ್ದಟತನ ಇವೆಲ್ಲವನ್ನೂ ಸಾರ್ವಜನಿಕರು ಸಾಮಾಜಿಕ ಜಾಲತಾಣ ಮೂಲಕ ಹಾಗೂ ಖುದ್ದಾಗಿ ಬಂದು ದೂರು ನೀಡಿದ್ದಾರೆ.

ನಿಮಗೆ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ, ನಾನು ಸರಿಪಡಿಸುತ್ತೇನೆ. ಸಂಜೆ ೬ ಗಂಟೆಯ ನಂತರ ಬರುವ ರೋಗಿಗಳನ್ನು ನೇರವಾಗಿ ಮಡಿಕೇರಿ ಅಥವಾ ಬೇರೆಡೆಗೆ ರವಾನಿಸುತ್ತಿರುವುದು ಗಮನಕ್ಕೆ ಬಂದಿದೆ. ಗರ್ಭಿಣಿ ಸ್ತಿçÃಯರನ್ನು ಗೋಣಿಕೊಪ್ಪ ಹಾಗೂ ಮಡಿಕೇರಿ ಜಿಲ್ಲಾಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ವೈದ್ಯರುಗಳನ್ನು ದೇವರು ಎಂದು ನಂಬಿ ಸಾರ್ವಜನಿಕರು ಆಸ್ಪತ್ರೆಗೆ ಬರುತ್ತಾರೆ ಅವರೊಂದಿಗೆ ಸೌಜನ್ಯವಾಗಿ ವರ್ತಿಸಿದಾಗ ಬಹುತೇಕ ಕಾಯಿಲೆಗಳು ಗುಣಮುಖವಾಗುತ್ತವೆ. ನನಗೆ ಸಾರ್ವಜನಿಕರ ಯೋಗಕ್ಷೇಮ ಬಹುಮುಖ್ಯ ಎಂದರಲ್ಲದೆ ಎಲ್ಲಾ ಕಡೆಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸಲು ಆದೇಶ ನೀಡಿದರು.

ಪ್ರಬಾರ ವೈದ್ಯಾಧಿಕಾರಿ ಡಾ. ಹೇಮಪ್ರಿಯ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರುಗಳು ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಮುಖ್ಯವಾಗಿ ಸ್ತಿçÃರೋಗ ತಜ್ಞರು, ಅರವಳಿಕೆ, ರೇಡಿಯಾಲಾಜಿ ಸೇರಿದಂತೆ ಪ್ರಮುಖ ವೈದ್ಯರ ಹುದ್ದೆಗಳು ಖಾಲಿ ಇವೆ. ಮರಣೋತ್ತರ ಪರೀಕ್ಷೆ ನಡೆಸುವ ಕೊಠಡಿ, ಶವಗಳನ್ನು ಇಡಲು ಶೀಥಲೀಕರಣ ಪೆಟ್ಟಿಗೆ, ಅಡುಗೆ ಕೋಣೆ, ಹೆರಿಗೆ ವಾರ್ಡ್ಗೆ ತೆರಳುವ ರಸ್ತೆ ದುರಸ್ತಿ, ಶಿಥಿಲಾವಸ್ಥೆಗೆ ತಲುಪಿದ ವೈದ್ಯರು ಹಾಗೂ ಸಿಬ್ಬಂದಿಗಳ ವಸತಿ ಗೃಹ, ಮತ್ತಿತರ ಸಮಸ್ಯೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಉತ್ತರಿಸಿದ ಶಾಸಕರು ಕೂಡಲೆ ಸ್ತಿçÃರೋಗ ತಜ್ಞರು ಹಾಗೂ ಅರವಳಿಕೆ ತಜ್ಞರನ್ನು ನೇಮಕ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ. ಕೆ.ಎಚ್.ಎಸ್.ಆರ್.ಡಿ.ಪಿ ಅಡಿಯಲ್ಲಿ ಅಡುಗೆ ಕೋಣೆ ಮತ್ತು ಶವಾಗಾರ ಹಾಗೂ ಶವ ಇಡುವ ಶೀಥಲೀಕರಣ ಪೆಟ್ಟಿಗೆಯನ್ನು ಖರೀದಿಸಲಾಗುವುದು. ವಸತಿ ಗೃಹಗಳ ಬಗ್ಗೆಯು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರಕ್ಷಾ ಸಮಿತಿ ಸದಸ್ಯ ಎಂ. ಮಂಜು ದೇವಯ್ಯ ಹಾಗೂ ಸಂತೋಷ್ ಮಾತನಾಡಿ, ಆಸ್ಪತ್ರೆಯ ಆವರಣದಲ್ಲಿರುವ ಕ್ಯಾಂಟಿನ್ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಧಾನಮಂತ್ರಿ ಭಾರತೀಯ ಜನಔಷಧಿ ಕೇಂದ್ರದಲ್ಲಿ ಬೇರೆ ಕಂಪನಿಗಳ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಂಟಿನ್‌ಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಟೆಂಡರ್ ಪ್ರಕ್ರಿಯೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ. ಸತೀಶ್, ತಾಲೂಕು ವೈದ್ಯಾಧಿಕಾರಿ ಡಾ. ಯತೀರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ರಕ್ಷಾ ಸಮತಿ ಸದಸ್ಯರಾದ ಕೆ.ಪಿ. ಮಂಜು ದೇವಯ್ಯ, ಶಿಭಾ ಪೃಥ್ವಿನಾಥ್, ಸಂತೋಷ್, ಕಿಶೋರ್, ವೈದ್ಯರುಗಳು ಉಪಸ್ಥಿತರಿದ್ದರು.