ನಾಪೋಕ್ಲು, ಆ. ೨೭: ಇಲ್ಲಿಗೆ ಸಮೀಪದ ಹಳೇತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ಆಧುನಿಕತೆಯಲ್ಲಿ ಮರೆಯಾಗುತ್ತಿರುವ ಅಪರೂಪದ ನಾಟಿ ಓಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಾಟಿ ಓಟದಲ್ಲಿ ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ಓಟವನ್ನು ಏರ್ಪಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಆದರ್ಶ ಪ್ರಥಮ, ರೋಷನ್ ದ್ವಿತೀಯ, ಕುಮಾರ್ ತೃತೀಯ, ಮಹಿಳೆಯರ ವಿಭಾಗ ಜ್ಯೋತಿ ಪ್ರಥಮ, ರೇಖಾ ದ್ವಿತೀಯ, ಸುಂದರಿ ತೃತೀಯ ಸ್ಥಾನ ಪಡೆದುಕೊಂಡರು. ಓಟಗಾರರಿಗೆ ಬಹುಮಾನಗಳನ್ನು ಕಾಶಿ ನಂಜಪ್ಪ ಅವರು ವಿತರಿಸಿ, ಪ್ರೋತ್ಸಾಹಿಸಿ, ಶುಭ ಹಾರೈಸಿದರು.