ಸೋಮವಾರಪೇಟೆ, ಆ. ೨೭: ಮೊಗೇರ ಸಮುದಾಯದವರ ಸರ್ವಾಂಗೀಣ ಏಳಿಗೆಗೆ ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿ ಮೊಗೇರ ಸಮಾಜವನ್ನು ಸಂಘಟಿಸಲು ತೀರ್ಮಾನ ಕೈಗೊಳ್ಳಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಪಿ.ಬಿ. ಜನಾರ್ಧನ್ ಅಧ್ಯಕ್ಷತೆಯಲ್ಲಿ ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ತಾಲೂಕು ಮೊಗೇರ ಸೇವಾ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು. ಮುಂದಿನ ದಿನಗಳಲ್ಲಿ ಮೊಗೇರ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು. ಮೊಗೇರ ಸಮಾಜಕ್ಕೆ ವಸತಿ ಸೌಕರ್ಯ ಒದಗಿಸಲು ಸರ್ಕಾರದ ಗಮನ ಸೆಳೆಯಬೇಕಿದೆ. ಈ ನಿಟ್ಟಿನಲ್ಲಿ ಸಂಘದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಸಂಘದ ತಾಲೂಕು ಘಟಕವನ್ನು ಪುನರ್ ರಚಿಸ ಲಾಯಿತು. ನೂತನ ಅಧ್ಯಕ್ಷರನ್ನಾಗಿ ಪಿ.ಕೆ. ವಸಂತ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಬಿ.ಎಲ್. ಹರೀಶ್, ಪ್ರಧಾನ ಕಾರ್ಯ ದರ್ಶಿಯಾಗಿ ಜಯಪ್ರಕಾಶ್, ಖಜಾಂಚಿಯಾಗಿ ಶೇಷಪ್ಪ ಕರ್ಕಳ್ಳಿ, ಗೌರವಾಧ್ಯಕ್ಷರಾಗಿ ಕೆ.ಎ. ದಿನೇಶ್, ಸಲಹೆಗಾರರಾಗಿ ಕೆ.ಬಿ. ನಂದ ಅವರುಗಳನ್ನು ನೇಮಿಸಲಾಯಿತು.
ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಬಿ. ಶಿವಪ್ಪ, ಸದಸ್ಯ ಪಿ.ಕೆ. ಚಂದ್ರು, ಜಿಲ್ಲಾ ಗೌರವಾಧ್ಯಕ್ಷ ಗೌತಮ್ ಶಿವಪ್ಪ, ಉಪಾಧ್ಯಕ್ಷ ಬಿ.ಎಂ. ದಾಮೋಧರ್, ಕಾರ್ಯದರ್ಶಿ ಹರೀಶ್, ಸಂಚಾಲಕ ಎಂ.ಪಿ. ದೇವಪ್ಪ, ಪಿ.ಎಂ. ರವಿ, ಸುರೇಶ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಗಣೇಶ್, ಕುಸುಬೂರು ಗ್ರಾಮ ಶಾಖೆ ಅಧ್ಯಕ್ಷ ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.