ಪೊನ್ನಂಪೇಟೆ, ಆ. ೨೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ತಲಾ ಮೂರು ವಿದಾರ್ಥಿಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೊನ್ನಂಪೇಟೆ ಕೆ.ಆರ್. ಬಬಿತ ಪ್ರಥಮ, ಬಿ.ಎಸ್. ಕೀರ್ತಿ ದ್ವಿತೀಯ ಮತ್ತು ಪಿ.ಎಸ್. ಭವಿಷ್ ತೃತೀಯ ಸ್ಥಾನ ಪಡೆದುಕೊಂಡರು. ದ್ವಿತೀಯ ಪಿಯುಸಿ ವಿಭಾಗದಲ್ಲಿ ಆಂಚನಾ ದಿನೇಶ್ ಮತ್ತು ಕೆ.ಎ. ಶಿಹಾಬ್ ಪ್ರಥಮ, ಸಿ.ಎಸ್. ಮುತ್ತಮ್ಮ ದ್ವಿತೀಯ, ವಿ. ಎಸ್. ಲವಿತ ತೃತೀಯ ಸ್ಥಾನ ಪಡೆದುಕೊಂಡರು.
ಈ ಸಂದರ್ಭ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯು ೨೦೨೨-೨೩ ನೇ ಸಾಲಿನ ಪಂಚಾಯತ್ ರಾಜ್ ಮಂತ್ರಾಲಯದ ರಾಷ್ಟಿçÃಯ ಪ್ರಶಸ್ತಿಯ ಉತ್ತಮ ಆಡಳಿತ ಗ್ರಾಮ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಯುಕ್ತ ಜಮ್ಮು ಮತ್ತು ಕಾಶ್ಮೀರ ಹಾಗೂ ಶ್ರೀನಗರದಲ್ಲಿ ನಡೆಯಲಿರುವ ರಾಷ್ಟç ಮಟ್ಟದ ಕಾರ್ಯಾಗಾರಕ್ಕೆ ಆಯ್ಕೆ ಯಾಗಿರುವುದನ್ನು ತಿಳಿಸಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಡಿ.ವಿ. ದಶಮಿ, ಸದಸ್ಯರಾದ ಮಧು ಕುಮಾರ್, ನಿಲನ್ ಸುಬ್ರಮಣಿ, ಅಣ್ಣೀರ ಹರೀಶ್, ರಶೀದ್, ಅಬ್ದುಲ್ ಅಜೀಜ್, ಜುನೈದ್, ಹೆಚ್.ಎನ್. ರವಿ, ಪಿ.ಟಿ. ರಮೇಶ್, ವಿಜಯ ಕುಮಾರ್, ರಾಮಕೃಷ್ಣ, ಕೆ.ಎ. ರಸಿಕ, ಎಂ.ಜಿ. ಸುಮಿತ, ನೇತ್ರಾವತಿ, ಪಿ.ಆರ್. ಮಂಜುಳ, ಆರತಿ ಸುರೇಶ್, ಕೆ.ಡಿ. ಯಮುನಾ, ಎಂ.ಡಿ. ವಿಮಲ, ಪಿ.ಜಿ. ಯಮುನಾ, ಪಿಡಿಓ ಆರ್.ಜೆ. ಪುಟ್ಟರಾಜು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.