ಕೂಡಿಗೆ, ಆ. ೨೭: ಈ ಸಾಲಿನಲ್ಲಿ ಮುಂಗಾರು ಮಳೆಯ ಪ್ರಮಾಣವು ತೀರ ಕಡಿಮೆ ಅಗಿರುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ರೈತರು ಕೊರೆಸಿಕೊಂಡಿರುವ ಕೊಳವೆ ಬಾವಿಗಳಲ್ಲಿ ಅಗಸ್ಟ್ ತಿಂಗಳಲ್ಲಿ ಬೇಸಿಗೆಯಂತೆ ನೀರಿನ ಪ್ರಮಾಣದಲ್ಲಿ ಕುಸಿತಗೊಂಡಿದೆ.
ಈ ಸಾಲಿನಲ್ಲಿ ಮಳೆಯ ಹೆಚ್ಚು ಬೀಳದೆ ಇರುವುದರಿಂದಾಗಿ ಭೂಮಿಯ ತೇವಾಂಶ ಬಾರಿ ಕಡಿಮೆಯಾಗಿ ರೈತರು ತಮ್ಮ ಜಮೀನಿನಲ್ಲಿ ಕೊರೆಸಿಕೊಂಡಿದ್ದ ಕೊಳವೆಬಾವಿಯಿಂದಾಗಿ ತಾವು ಬೆಳೆದ ಬೆಳೆಗಳಿಗೆ ನೀರನ್ನು ಉಪಯೋಗಿಸಿಕೊಂಡು ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅರೆ ಮಲೆನಾಡು ಪ್ರದೇಶದಲ್ಲಿ ಮಳೆಯನ್ನೇ ಅವಲಂಬಿಸಿ ಬೆಳೆಯನ್ನು ಬೆಳೆದ ರೈತರಿಗೆ ಅಂತರ್ಜಲ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿಯಿಂದ ನೀರು ಮೇಲ್ಗಡೆ ಬರುವ ನೀರಿನ ಪ್ರಮಾಣದಲ್ಲಿ ಬಾರಿ ಕಡಿಮೆಯಾಗುತ್ತದೆ.
ಕಳೆದ ಹತ್ತು ವರ್ಷಗಳಿಂದಲೂ ಇಂತಹ ಪ್ರಸಂಗ ಆಗಸ್ಟ್ ತಿಂಗಳಲ್ಲಿ ಬಂದಿರಲಿಲ್ಲಾ ಎಂದು ಚಿಕ್ಕ ಅಳುವಾರದ ಪ್ರಗತಿಪರ ರೈತರಾದ ಬೀಬಿಯಣ್ಣ, ಮಹೇಶ್ ದೇವರಾಜ್ ತಮ್ಮ ಅನುಭವ ಹಂಚಿಕೊAಡಿದ್ದಾರೆ.
ಈಗಾಗಲೇ ಅನೇಕ ಗ್ರಾಮಗಳಲ್ಲಿ ಮೆಕ್ಕೆಜೋಳದ ಬೆಳೆಯು ಒಣಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ಸಂಬAಧಿಸಿದ ಜಿಲ್ಲಾಧಿಕಾರಿ ಮಾಹಿತಿಯನ್ನು ನೀಡುವ ರೈತರ ಪರಿಹಾರವನ್ನು ಒದಗಿಸುವಲ್ಲಿ ಮುಂದಾಗಬೇಕೆAದು ಈ ಭಾಗದ ರೈತರ ಒತ್ತಾಯವಾಗಿದೆ.