ಮಡಿಕೇರಿ, ಆ. ೨೭: ಕೇಂದ್ರ ಮೌಲ್ಯಮಾಪನ ಸಮಿತಿಯ ನಿರ್ದೇಶನದನ್ವಯ ಸೋಮವಾರಪೇಟೆ ಉಪ ನೋಂದಣಿ ಕಚೇರಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಮಾರುಕಟ್ಟೆ ಬೆಲೆಯನ್ನು ೨೦೨೩-೨೪ ನೇ ಸಾಲಿಗೆ ತಿದ್ದುಪಡಿ ಮಾಡಲು ಉಪ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್, ೧೯ ರಂದು ಸೋಮವಾರಪೇಟೆ ತಹಶೀಲ್ದಾರ್ ಅವರ ಕಾರ್ಯಾಲಯದಲ್ಲಿ ಉಪ ಸಮಿತಿಯ ಕಾರ್ಯದರ್ಶಿಗಳು ಹಾಗೂ ಸದಸ್ಯರು ಒಳಗೊಂಡAತೆ ಎಲ್ಲಾ ಸದಸ್ಯರು ಹಾಜರಾಗಿ ಚರ್ಚಿಸಿ ಮಾರುಕಟ್ಟೆ ಬೆಲೆಯ ಮಾರಾಟ ಅಂಕಿ ಅಂಶಗಳ ಹಾಗೂ ಸಾರ್ವಜನಿಕರ ಮಾಹಿತಿಯ ಆಧಾರದ ಮೇಲೆ ಗ್ರಾಮವಾರು ಮಾರುಕಟ್ಟೆ ಬೆಲೆಯನ್ನು ತಿದ್ದುಪಡಿ ಮಾಡಲು ತೀರ್ಮಾಸಲಾಗಿದೆ.

ಮಾರುಕಟ್ಟೆ ಬೆಲೆಯನ್ನು ತಿದ್ದುಪಡಿ ಮಾಡುವ ಕುರಿತು ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆ ಇದ್ದಲ್ಲಿ ೧೫ ದಿವಸದೊಳಗೆ (ಸೆಪ್ಟೆಂಬರ್ ೮ ರೊಳಗೆ) ಉಪನೋಂದಣಿ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ಸೋಮವಾರಪೇಟೆ ಉಪ ನೋಂದಣಾಧಿಕಾರಿ ಅವರು ತಿಳಿಸಿದ್ದಾರೆ.