ಕೂಡಿಗೆ, ಆ. ೨೬. ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಚರ್ಚೆ ಸಂಘದ ವ್ಯಾಪ್ತಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ೨೦೨೨-೨೩ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮೇಲೆ ಸಂಬAಧಿಸಿದAತೆ ಅನೇಕ ಚರ್ಚೆಗಳು, ಸಾಲ ಸೌಲಭ್ಯಗಳು ಸೇರಿದಂತೆ ಸಂಘದ ಸದಸ್ಯರುಗಳಿಗೆ ಸಂಬAಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಸಭೆಯಲ್ಲಿ ಈ ಸಾಲಿನಲ್ಲಿ ಸಂಘವು ರೈತರಿಗೆ ವಿತರಣೆ ಮಾಡಿರುವ ಕೃಷಿ ಸಾಲವನ್ನು ಉಪಯೋಗಿಸಿಕೊಂಡು ಮೆಕ್ಕೆಜೋಳ ಮತ್ತು ಸಿಹಿಗೆಣಸು, ಭತ್ತ ಬೆಳೆಗಳು ಒಣಗುತ್ತಿರುವುದರಿಂದಾಗಿ ಮತ್ತು ಮುಂಗಾರು ಮಳೆಯು ಕ್ಷೀಣಗೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ಸಹಕಾರ ಸಂಘದ ನಿರ್ದೇಶಕರು ಜಂಟಿಯಾಗಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯು ಒಣಗುತ್ತಿರುವದನ್ನು ಸಮೀಕ್ಷೆ ನಡೆಸುವಂತೆ ಹಾಜರಿದ್ದ ರೈತ ಸದಸ್ಯರು ಒತ್ತಾಯ ಮಾಡಿದರು. ಅಲ್ಲದೆ ಸಹಕಾರ ಸಂಘವನ್ನು ಪ್ರತ್ಯೇಕವಾಗಿ ಕೂಡಿಗೆ ಭಾಗದಲ್ಲಿ ತೆರೆಯಲು ಬಂದ ಅರ್ಜಿಗಳ ಬಗ್ಗೆ ಚರ್ಚೆಗಳು ನಡೆದು ಅದನ್ನು ಮಹಾಸಭೆಗೆ ಅಧ್ಯಕ್ಷರು ಮಂಡಿಸಿದಾಗ ಆ ಅರ್ಜಿಯು ತಿರಸ್ಕೃತಗೊಂಡಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾತನಾಡುತ್ತಾ ೨೦೨೨-೨೩ ಸಾಲಿನಲ್ಲಿ ೧೧೭.೯೫ ಕೋಟಿ ವ್ಯವಹಾರ ನಡೆಸಿದ್ದು ಇದರಲ್ಲಿ ರೂ ೨೫.೩೧ ಕೋಟಿಗಳಷ್ಟು ಸಾಲವನ್ನು ವಿವಿಧ ಬಗೆಯಲ್ಲಿ ಸದಸ್ಯರಿಗೆ ವಿತ ರಣೆ ಮಾಡಲಾಗಿದೆ. ಅದೇ ರೀತಿ ಯಲ್ಲಿ ಸಾಲ ವಸೂಲಾತಿಯನ್ನು ಮರು ಪಾವತಿಸಿಕೊಳ್ಳುವುದರ ಮೂಲಕ ಸಂಘವು ಈ ಸಾಲಿನಲ್ಲಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರ್ಗೀಕರಣ ಮಾನದಂಡದAತೆ ಸಂಘವು "ಬಿ", ತರಗತಿಯಿಂದ" ಎ" ತರಗತಿಗೆ ವರ್ಗಾವಣೆಗೊಂಡಿದೆ.
ಈ ಸಾಲಿನಲ್ಲಿ ಸಂಘವು ವಿವಿಧ ಸಾಲ ಸೌಲಭ್ಯಗಳನ್ನು ರೈತರಿಗೆ ನೀಡುವ ಮೂಲಕ ಮತ್ತು ಇತರೆ ವ್ಯವಹಾರಗಳ ಮೂಲಕ ೭೦.೩೩ ಲಕ್ಷ ಲಾಭವನ್ನು ಗಳಿಸಿದೆ, ಇದೇ ಮೊದಲು ಬಾರಿ ದೊಡ್ಡ ಪ್ರಮಾಣದ ಲಾಭಾಂಶ ವಾಗಿರುತ್ತದೆ ಎಂದರು. ನಂತರ ರೈತರಿಗೆ ಅನುಕೂಲವಾಗುವಂತೆ ವಿವಿಧ ಹೊಸ ಯೋಜನೆಗಳನ್ನು ಮತ್ತು ಸಂಘದ ಪ್ರಗತಿ ಪೂರಕವಾದ ಯೋಜನೆಯ ಮೂಲಕ ಸೀಗೆಹೊಸೂರು ಮತ್ತು ಕೂಡಿಗೆ ಸಹಕಾರ ಸಂಘದ ಜಾಗದಲ್ಲಿ ನಬಾರ್ಡ್ನ ಸಹಕಾರದೊಂದಿಗೆ ೨ ಕೋಟಿಗೂ ಹೆಚ್ಚು ಹಣವನ್ನು ಉಪಯೋಗಿಸುವ ಮೂಲಕ ಸುಸಜ್ಜಿತವಾದ ರೈತ ಸಮುದಾಯದ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಬೇಡಿಕೆಯ ಅನುಗುಣವಾಗಿ ವಿವಿಧ ಸಾಲಗಳ ಜೊತೆಗೆ ಹೊಸ ಸಾಲಗಳಾದ ಹೈನುಗಾರಿಕೆ, ದ್ವಿಚಕ್ರ ವಾಹನ, ಆಟೋರಿಕ್ಷಾ, ನಾಲ್ಕು ಚಕ್ರದ ಮಿನಿ ವಾಹನಗಳು ಮತ್ತು ಮಾರ್ಟಗೇಜ್, ಸಾಲಗಳನ್ನು ನೀಡಲು ಅಡಳಿತ ಮಂಡಳಿ ಚಿಂತಿಸಿದ್ದು ಅದರ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.
ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಎಂ.ಪಿ. ಮೀನ ವಾಚಿಸಿದರು. ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಮತ್ತು ಪದವಿಪೂರ್ವ ಕಾಲೇಜು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭ ಸಭೆಯಲ್ಲಿ ಉಪಾಧ್ಯಕ್ಷ ಟಿ.ಪಿ. ಹಮೀದ್, ನಿರ್ದೇಶಕರಾದ ತಮ್ಮಣ್ಣೇಗೌಡ, ಅರುಣ್ ಕುಮಾರ್, ಪಾರ್ವತಮ್ಮ, ಕೃಷ್ಣಗೌಡ, ರಮೇಶ್, ಪವಿತ್ರ, ನಾಗರಾಜು, ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ, ಪಿ, ಮೀನ, ವೃತ್ತಿ ನಿರ್ದೇಶಕರಾದ, ಆರ್. ಕೆ. ನಾಗೇಂದ್ರ ಬಾಬು, ಚಂದ್ರ ಶೇಖರ್, ಕೂಡಿಗೆ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧಿಕಾರಿ ಅನುರಾಧ ಸೇರಿ ದಂತೆ ಅಧಿಕಾರಿ ವರ್ಗದವರು ಹಾಜ ರಿದ್ದರು. ಸ್ವಾಗತ ಟಿ.ಪಿ. ಹಮೀದ್, ಕೆ.ಟಿ.ಅರುಣ್ ಕುಮಾರ್ ವಂದಿಸಿದರು.