ಮಡಿಕೇರಿ, ಆ. ೨೭: ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಅವರ ನಿರ್ದೇಶನದನ್ವಯ ಮಡಿಕೇರಿ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳ ಸ್ಥಿರಾಸ್ತಿಗಳ ದರಗಳನ್ನು ಮಡಿಕೇರಿ ಮಾರುಕಟ್ಟೆ ಬೆಲೆ ಉಪ ಸಮಿತಿಯಲ್ಲಿ ೨೦೨೩-೨೪ನೇ ಸಾಲಿಗೆ ಅನ್ವಯವಾಗುವಂತೆ ಪರಿಷ್ಕರಿಸಲು ಉದ್ದೇಶಿಸಿದ್ದು, ಈ ದರಪಟ್ಟಿಯನ್ನು ಆಗಸ್ಟ್, ೨೪ ರಿಂದ ಮಡಿಕೇರಿ ಉಪ ನೋಂದಣಿ ಕಚೇರಿಯಲ್ಲಿ ಸೇರಿದಂತೆ ತಾಲೂಕು ಕಚೇರಿ, ನಗರ ಸಭೆ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಕಚೇರಿಗಳ ಸೂಚನಾ ಫಲಕದಲ್ಲಿ ಸಾರ್ವಜನಿಕರ ಅವಗಾಹನೆಗೆ ಪ್ರಕಟಿಸಲಾಗಿದೆ.
ಈ ಬಗ್ಗೆ ಯಾವುದಾದರು ಆಕ್ಷೇಪಣೆಗಳು ಇದ್ದಲ್ಲಿ ಸಾರ್ವಜನಿಕರು ಹಿರಿಯ ಉಪ ನೋಂದಣಾಧಿಕಾರಿಗಳು, ಮಡಿಕೇರಿ ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆಯನ್ನು ಸೆಪ್ಟೆಂಬರ್ ೧೨ ರೊಳಗೆ ಸಲ್ಲಿಸುವಂತೆ ಮಡಿಕೇರಿ ಉಪ ನೋಂದಣಾಧಿಕಾರಿ ತಿಳಿಸಿದ್ದಾರೆ.