ಮಡಿಕೇರಿ, ಆ. ೨೭: ಪಶುಪಾಲನೆ ಇಲಾಖೆಯ ಅಸಂಘಟಿತ ವಲಯದಲ್ಲಿನ ಹಂದಿ, ಕುರಿ, ಮೇಕೆ ಸಾಕಾಣಿಕೆಯನ್ನು ಸಂಘಟಿತ ವಲಯಕ್ಕೆ ಕರೆದೊಯ್ಯಲು ಹಾಗೂ ಪ್ರಗತಿಪರ ರೈತರನ್ನು ಉದ್ಯಮೆದಾರರನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಅಭಿ ಯಾನ ಯೋಜನೆಯಡಿಯಲ್ಲಿ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಮೂಲಕ ಜಾನುವಾರು ಉತ್ಪನ್ನ ಒದಗಿಸುವುದು, ಯುವಜನತೆಗೆ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸಲು ಪ್ರೋತ್ಸಾಹ ನೀಡುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳ ಪ್ರಯೋಜನ ಪಡೆದು ಕೊಳ್ಳಲು ತಿತಿತಿ.uಜಥಿಚಿmimiಣಡಿಚಿ.ಛಿom ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟಿçÃಯ ಜಾನುವಾರು ಮಿಷನ್ ಯೋಜನೆಯಡಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ (ಎನ್‌ಎಲ್‌ಎಂ-ಇಡಿ) ದಡಿ ಹಂದಿ ಘಟಕ(೫೦ ಹೆಣ್ಣು, ೫ ಗಂಡು) ಕ್ಕೆ ರೂ.೩೦ ಲಕ್ಷ, ಸಹಾಯಧನ ರೂ.೧೫ ಲಕ್ಷ (ಶೇ.೫೦), ಹಂದಿ ಘಟಕ (೧೦೦ ಹೆಣ್ಣು, ೧೦ ಗಂಡು) ರೂ. ೬೦ ಲಕ್ಷ, ಸಹಾಯಧನ ರೂ.೩೦ ಲಕ್ಷ, ಕುರಿ-ಮೇಕೆ ಘಟP À(೧೦೦ ಹೆಣ್ಣು, ೫ ಗಂಡು)ಕ್ಕೆ ರೂ. ೨೦ ಲಕ್ಷ, ಸಹಾಯಧನ ರೂ.೧೦ ಲಕ್ಷ ಆಗಿರುತ್ತದೆ.

ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ(ಪಿಎಂ-ಎಫ್‌ಎAಇ) ಈ ಯೋಜನೆಯಡಿಯಲ್ಲಿ ಹೊಸ ಉದ್ದಿಮೆ ಸ್ಥಾಪಿಸಲು, ಹಾಲಿ ಇರುವ ಆಹಾರ ಸಂಸ್ಕರಣಾ ಘಟಕ ಉನ್ನತೀಕರಿಸಲು ಅವಕಾಶವಿದ್ದು, ಯೋಜನಾ ವೆಚ್ಚದ ಶೇ.೩೫ ಕೇಂದ್ರ ಸರ್ಕಾರ ಮತ್ತು ಶೇ.೧೫ ರಷ್ಟು ರಾಜ್ಯ ಸರ್ಕಾರದ ಸಹಾಯಧನ ನೀಡಲಾಗುವುದು. (ಗರಿಷ್ಠ ಸಹಾಯಧನದ ಮಿತಿ ರೂ. ೧೫ ಲಕ್ಷ). ಅರ್ಜಿದಾರರು ಯೋಜನಾ ವರದಿ, ಭೂ ದಾಖಲೆ, ಘಟಕ ಸ್ಥಳದ ಜಿಪಿಎಸ್ ಭಾವಚಿತ್ರ, ಕಳೆದ ೬ ತಿಂಗಳ ಬ್ಯಾಂಕ್ ವಹಿವಾಟು ವಿವರ, ವಿದ್ಯಾರ್ಹತೆ, ತರಬೇತಿ, ಅನುಭವ ಹೊಂದಿರುವ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಶುಪಾಲಕರಿಗೆ ಆರ್ಥಿಕ ನೆರವು : ಹೈನುಗಾರಿಕೆ, ಹಂದಿ, ಕುರಿ, ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ ರೈತರಿಗೆ ಅಲ್ಪಾವಧಿಯ ದುಡಿಯುವ ಬಂಡವಾಳ(ವರ್ಕಿAಗ್ ಕ್ಯಾಪಿಟಲ್) ನೀಡುವ ಉದ್ದೇಶ. ಅಗತ್ಯತೆಗೆ ತಕ್ಕಂತೆ ಬ್ಯಾಂಕ್‌ಗಳಿAದ ಶೇ.೨ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲಾಗುವುದು.

ವಿವಿಧ ಚಟುವಟಿಕೆಗಳಿಗೆ ನಿಗದಿಪಡಿಸಿದ ದುಡಿಯುವ ಬಂಡವಾಳ : ಮಿಶ್ರತಳಿ ಹಸು ಘಟಕ (೨ಕ್ಕೆ ಸೀಮಿತ) ರೂ.೩೬ ಸಾವಿರ, ಸುಧಾರಿತ ತಳಿ ಎಮ್ಮೆ ಘಟಕ (೨ ಕ್ಕೆ ಸೀಮಿತ) ರೂ.೪೨ ಸಾವಿರ, ಹಂದಿ (೧೦ ಹಂದಿ) ರೂ.೬೦ ಸಾವಿರ ಹಾಗೂ ಕುರಿ-ಮೇಕೆ ಘಟಕ (೧೦+೧) ರೂ. ೧೪,೭೦೦ ಆಗಿದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಮಡಿಕೇರಿ ೯೪೪೮೬೪೭೨೭೬ ಮತ್ತು ವಿಸ್ತರಣಾ ಅಧಿಕಾರಿ ಪಶು ಆಸ್ಪತ್ರೆ, ಮಡಿಕೇರಿ ೯೪೪೯೦೮೩೮೭೬ ನ್ನು ಸಂಪರ್ಕಿಸಬಹುದು ಎಂದು ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.