ಕುಶಾಲನಗರ, ಆ. ೨೫: ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಕುಶಾಲ ನಗರದಲ್ಲಿ ರಫ್ತ್ತುದಾರರ ಉತ್ತೇಜನ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಸರಕಾರಿ ಇಂಜಿನಿ ಯರಿಂಗ್ ಕಾಲೇಜಿನ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿಗಳು, ರಫ್ತುದಾರ ಮತ್ತು ರಫ್ತು ಮಾಡಲು ಇಚ್ಚಿಸುವ ಉದ್ಯಮಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ಮತ್ತು ರಫ್ತು ಮಾಡುವ ವಸ್ತುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಸಂಬAಧಿಸಿದ ಇಲಾಖೆಗಳು ಸಮಗ್ರ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಅವಕಾಡೊ (ಬಟರ್ ಫ್ರೂಟ್) ಬೆಳೆ ಬೆಳೆಯುವ ಬಗ್ಗೆ ಉತ್ತೇಜನ ನೀಡಿ ರಫ್ತು ಮಾಡಲು ಎಲ್ಲಾ ರೀತಿಯ ಅವಕಾಶ ಇರುವುದಾಗಿ ಅವರು ತಿಳಿಸಿದರು. ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಕಾಫಿ ಕಾಳು ಮೆಣಸು ಏಲಕ್ಕಿ ವಿಶೇಷ ಹೂಗಳು ಮುಂತಾದ ಬೆಳೆಗಳನ್ನು ರಫ್ತು ಮಾಡಲು ನವ ಉದ್ಯಮಿಗಳು ಆಸಕ್ತಿ ವಹಿಸಬೇಕು ಎಂದರು. ಫಿಯೋ ಸಂಸ್ಥೆಯ ಮುಖ್ಯಸ್ಥ ರಾದ ವೈಶಾಲಿ ಹರಿಹರನ್ ಉದ್ಯಮಿಗಳಿಗೆ ರಫ್ತು ಬಗ್ಗೆ ಸಮಗ್ರ ಮಾಹಿತಿ ಹಾಗೂ ಸೇವೆಗಳ ಬಗ್ಗೆ ಮಾಹಿತಿ ಒದಗಿಸಿದರು. ಅಪ್ಪಂಗಳ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಅಂಕೆ ಗೌಡ ಅವರು ಏಲಕ್ಕಿ ಕಾಳುಮೆಣಸು ಮತ್ತಿತರ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವುದರೊಂದಿಗೆ ರಫ್ತು ಸಾಗಾಟದ ಬಗ್ಗೆ ನವ ಉದ್ಯಮಿಗಳಿಗೆ ಅಂಕಿ ಅಂಶ ನೀಡಿದರು.

ಡೈರೆಕ್ಟರೇಟ್ ಆಫ್ ಜನರಲ್ ಫಾರಿನ್ ಟ್ರೇಡಿಂಗ್ ಹಿರಿಯ ಅಧಿಕಾರಿ ಬಾಬು ಮಿತ್ತಲ್ ಅವರು ರಫ್ತುದಾರರಿಗೆ ಮುಕ್ತ ನಿರ್ಬಂಧಿತ ಹಾಗೂ ನಿಷೇಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ಒದಗಿಸಿದರು

ಇದೇ ಸಂದರ್ಭ ಸಭೆಯಲ್ಲಿ ಪಾಲ್ಗೊಂಡಿದ್ದ ರಫ್ತುದಾರ ಉದ್ಯಮಿಗಳು ಹಾಗೂ ರಫ್ತು ಮಾಡಲು ಇಚ್ಚಿಸುವ ಉದ್ದಿಮೆದಾರರು ಜಿಲ್ಲಾಧಿಕಾರಿ ಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ರಫ್ತು ಸಂದರ್ಭ ಮಧ್ಯವರ್ತಿಗಳ ಹಾವಳಿ, ಅಧಿಕ ಬೆಲೆ, ಉತ್ಪನ್ನಗಳ ಗುಣಮಟ್ಟ ಬಗ್ಗೆ ಚರ್ಚೆಗಳು ನಡೆದವು.

ಸರಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸಿ.ಎನ್. ರಘು, ಇದ್ದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಉತ್ಪನ್ನಗಳ ರಫ್ತುದಾರರು, ರಫ್ತು ಮಾಡಲು ಇಚ್ಚಿಸುವ ಉದ್ದಿಮೆದಾರರು ಭಾಗವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ. ದಿನೇಶ್ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.