ಶ್ರೀಮಂಗಲ, ಆ. ೨೫: ಹುದಿಕೇರಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಟಿ. ಶೆಟ್ಟಿಗೇರಿ ಎಂ.ಎA. ಸ್ಮಾರಕ ಸರಕಾರಿ ಪ್ರೌಢಶಾಲೆ ಮತ್ತು ಸ.ಹಿ.ಪ್ರಾ. ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಅಂರ‍್ರಾಷ್ಟಿçÃಯ ಸ್ಕೀಯಿಂಗ್ ಕ್ರೀಡಾಪಟು ತೆಕ್ಕಡ ಭವಾನಿ ನಂಜುAಡ ಅವರು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ತೆಕ್ಕಡ ಭವಾನಿ ನಂಜುAಡ ಅವರ ಸಾಧನೆಯನ್ನು ಪ್ರಶಂಶಿಸಿ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ ಅವರು ರೂ. ೫ ಸಾವಿರ ಪ್ರೋತ್ಸಾಹಧನ ನೀಡಿ ಗೌರವಿಸಿದರು.
ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಟ್ಟು, ಸದಸ್ಯ ಪ್ರಭು, ಮಾಜಿ ಸೈನಿಕ ಅಪ್ಪಚ್ಚಂಗಡ ಮೋಟಯ್ಯ, ದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ, ಉಳುವಂಗಡ ದತ್ತ, ಚೆಟ್ಟಂಗಡ ಪುಣ್ಯಾವತಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜ್ಯೋತಿ, ಸದಸ್ಯರಾದ ಮುಕ್ಕಾಟೀರ ವೇಣು, ಅಪ್ಪಿ, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಲಾಲ್‌ಕುಮಾರ್, ತಾಲೂಕು ಕ.ರಾ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉತ್ತಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗಾಯತ್ರಿ, ಬಿ.ಆರ್.ಪಿ. ಪುಷ್ಪಾ, ಸಿ.ಆರ್.ಪಿ. ಅನಿತಾ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮರಿದೇವರ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರಾಜೇಶ್ವರಿ, ಉಭಯ ಶಾಲಾ ಶಿಕ್ಷಕರು, ಯೋಗಪಟು ಅಮೃತ, ತೆಕ್ಕಡ ನಂಜುAಡ, ಪಾರ್ವತಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕವಿತಾ, ಬೋಪಣ್ಣ, ಸುಬ್ರಮಣಿ, ಸಂಪತ್, ಅಲಿಮಾ, ಟಿ. ಶೆಟ್ಟಿಗೇರಿ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಫ್ರೌಢಶಾಲಾ ಶಿಕ್ಷಕರಾದ ಮಂಜುಳಾ, ರೂಪಾ, ಸವಿತಾ, ವನಜಾಕ್ಷಿ ನಿರೂಪಿಸಿದರು.