ಮಡಿಕೇರಿ, ಆ. ೨೬: ಮಕ್ಕಂದೂರು ವಿವಿಧೋದ್ದೇಶ ಸಹಕಾರ ದವಸ ಭಂಡಾರದಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಂಬಗೌಡನ ಟಿ. ಪ್ರಸನ್ನ ಮತ್ತು ಉಪಾಧ್ಯಕ್ಷರಾಗಿ ಪಡಿಯಟ್ಟೀರ ಎ. ರಾಮಯ್ಯ ಅವರು ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಯು.ಎಂ. ನಾಣಯ್ಯ, ಯು.ಎನ್. ಸುಬ್ಬಯ್ಯ, ಕೆ.ಪಿ. ಜಗದೀಪ್, ಹೆಚ್.ಎ. ಕಾಳಪ್ಪ, ಎಲ್.ಕೆ. ಹರಿನಾಥ್ ಕುಮಾರ್, ಎಸ್.ಸಿ. ಪದ್ಮಾವತಿ, ಪಿ.ಎನ್. ಪೂವಮ್ಮ, ಹೆಚ್.ವಿ. ಆನಂದ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.