ಗುಡ್ಡೆಹೊಸೂರು, ಆ. ೨೫: ವೀರಯೋಧರಿಗೆ ವಂದನೆ ಅರ್ಪಿಸುವ ವಿಶೇಷವಾದ ದಿನವನ್ನು ರಾಜ್ಯದ್ಯಂತ ಮತ್ತು ದೇಶದ್ಯಂತ ಆಚರಿಸಲಾಯಿತು. ``ನನ್ನ ನೆಲ ನನ್ನ ದೇಶ’’ ಈ ವಿಷಯಕ್ಕೆ ಸಂಬAಧಿಸಿದAತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ನಡೆಯಿತು.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿನ ಅಂಗನವಾಡಿ ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಇಲ್ಲಿನ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಎಂ.ಆರ್. ಮಾದಪ್ಪ ಮತ್ತು ಸದಸ್ಯರು, ಪಿ.ಡಿ.ಓ. ಶ್ಯಾಂ ಮತ್ತು ಕಾರ್ಯದರ್ಶಿ ಕುಮಾರಸ್ವಾಮಿ ಮುಂತಾದವರು ಹಾಜರಿದ್ದರು.