ಗೋಣಿಕೊಪ್ಪ ವರದಿ, ಆ. ೨೪ ; ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯದ ಅಂತರ ಮಹಾ ವಿದ್ಯಾಲಯಗಳ ಪಂದ್ಯಾವಳಿ ತಾ.೨೮ ರಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮೈದಾನದಲ್ಲಿ ಆಯೋಜಿಸಲಾಗಿದೆ. ಫುಟ್ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಕ್ರೀಡೆಗಳು ನಡೆಯಲಿವೆ.
ಉದ್ಘಾಟನೆ ಬೆ. ೧೦ ಗಂಟೆಗೆ ನಡೆಯಲಿದೆ. ಮಡಿಕೇರಿ ಫೀ. ಮಾ. ಕೆ. ಎಂ. ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಪುಷ್ಪಾ ಕುಟ್ಟಣ್ಣ ಉದ್ಘಾಟಿಸಲಿದ್ದು, ಶಿವಮೊಗ್ಗ ವಿಶ್ವವಿದ್ಯಾಲಯ ವಿದ್ಯಾರ್ಥಿ ಕಲ್ಯಾಣ ಮುಖ್ಯಸ್ಥ ಡಾ. ಎನ್. ಶಿವಶಂಕರ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮುಖ್ಯಸ್ಥ ಡಾ. ಜಿ. ಎಂ. ದೇವಗಿರಿ ಭಾಗವಹಿಸಲಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.