ಮಡಿಕೇರಿ, ಆ. ೨೫: ಹೊದ್ದೂರು-ಕಬಡಕೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ತೆಕ್ಕಡೆ ಎಲ್. ರಾಜೇಶ್ವರಿ, ಉಪಾಧ್ಯಕ್ಷರಾಗಿ ಮೇಕಂಡ ಬಿ. ಪೆಮ್ಮಯ್ಯ, ನಿರ್ದೇಶಕರಾಗಿ ಚೆಟ್ಟಿಮಾಡ ಎ. ದಿವಿ, ಜಿ. ಪುರುಷೋತ್ತಮ್, ಎ. ಭಗವಾನ್, ಎ. ನಿವ್ಯಕುಮಾರಿ, ಅಮ್ಮಣಂಡ ಪಿ. ಪೂಣಚ್ಚ, ಎ.ಪಿ. ಭಾಗ್ಯಶ್ರೀ, ಮೇಕಂಡ ಎಸ್. ಪಾರ್ವತಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಚಂದ್ರಮೌಳಿ ಕಾರ್ಯನಿರ್ವಹಿಸಿದರು. ದವಸ ಭಂಡಾರದ ಕಾರ್ಯದರ್ಶಿ ಚೆಟ್ಟಿಮಾಡ ಸುನಿ ಲಕ್ಷö್ಮಣ ಉಪಸ್ಥಿತರಿದ್ದರು.