ಕೂಡಿಗೆ, ಆ. ೨೫: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬಾರೆ ಮುಖ್ಯ ರಸ್ತೆಗೆ ಹೊಂದಿಕೊAಡAತೆ ಇರುವ ಉಪ ರಸ್ತೆಯ ಕಾಮಗಾರಿ ಮತ್ತು ಗುಳಿಗ ಚೌಂಡಿ ದೇವಸ್ಥಾನದ ಬನದ ಆವರಣದೊಳಗೆ ಪಂಚಾಯಿತಿಯ ಅನುದಾನದಲ್ಲಿ ನಡೆಯುತ್ತಿರುವ ಕಾಂಕ್ರಿಟ್ ರಸ್ತೆಯ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಮತ್ತು ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದುಬಾರೆ ಮುಖ್ಯ ರಸ್ತೆಗೆ ಹೊಂದಿಕೊAಡAತಹ ಉಪ ರಸ್ತೆಯು ರೂ.೨, ಲಕ್ಷ ವೆಚ್ಚ ಮತ್ತು ದೇವಸ್ಥಾನದ ರಸ್ತೆಯು ರೂ. ೭೦,೦೦೦ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯ ಕಾಮಗಾರಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಸಿ.ಎಲ್. ವಿಶ್ವ, ಉಪಾಧ್ಯಕ್ಷೆ ಪಿ.ಎನ್. ಕುಸುಮ, ಸದಸ್ಯರಾದ ಜಾಜಿ ತಮ್ಮಯ್ಯ, ಸಮೀರಾ, ಅಭಿವೃದ್ಧಿ ಅಧಿಕಾರಿ ಕಲ್ಪಾ, ಸೇರಿದಂತೆ ಆಯಾ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.