ವೀರಾಜಪೇಟೆ, ಆ. ೨೩ ತಾಲೂಕಿನ ವಿವಿಧ ಕಡೆಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿ ಸಲಾಯಿತು. ನಗರದ ವಿವಿಧ ಕಡೆಗಳಲ್ಲಿರುವ ದೇವಾಲಯ ಗಳಲ್ಲಿ ಮಹಿಳೆಯರು ದೇವಸ್ಥಾ ನಗಳ ಎದುರಿನ ನಾಗ ಪ್ರತಿಮೆ ಗಳಿಗೆ ಹಾಲು ಅಭಿಷೇಕ ಮಾಡಿ, ಅರಿಶಿಣ ದಾರ ಕಟ್ಟಿ ಭಕ್ತಿಯಿಂದ ಪೂಜಿಸಿದರು. ಕೆಲವು ಕಡೆ ಜನರು ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ನಮಿಸಿದರು. ಹಬ್ಬಕ್ಕಾಗಿ ಮಾಡಿರುವ ವಿವಿಧ ಸಿಹಿ ಪದಾರ್ಥಗಳನ್ನು ನಾಗ ದೇವತೆಗೆ ನೈವೇದ್ಯ ಮಾಡಿ ಜನರು ಪುನಿತರಾದರು.

ಕೆಲವು ದೇವಾಲಯಗಳಲ್ಲಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿ ಅನ್ನ ಸಂತರ್ಪಣೆ ಮಾಡಲಾಯಿತು.