ಮಡಿಕೇರಿ, ಆ. ೨೪: ತೋಟದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ೮ ಮಂದಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಾಂತೂರು ಮೂರ್ನಾಡಿನ ಕೆ.ವಿ. ಚೇತನ್ ಅವರ ತೋಟದಲ್ಲಿ ಜೂಜಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ತೋಟದ ಮಾಲೀಕ ಚೇತನ್ ಸೇರಿದಂತೆ ಮೂರ್ನಾಡು ನಿವಾಸಿಗಳಾದ ಪಿ.ಎಸ್. ಶೇಖರ್, ಶರತ್ ಕುಮಾರ್, ಗಣೇಶ್, ಪಿ.ಟಿ. ಸತೀಶ್, ಕೆ.ಎಂ. ಕಾರ್ಯಪ್ಪ, ಸತೀಶ್ ಕುಮಾರ್, ಆರ್. ರವಿ ಎಂಬವರನ್ನು ಬಂಧಿಸಿ ಜೂಜಾಟಕ್ಕೆ ಬಳಸಿದ ರೂ. ೯೧ ಸಾವಿರ ನಗದು, ಮೂರು ಬೈಕ್, ಒಂದು ಕಾರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಡಿವೈಎಸ್ ಪಿ. ಜಗೀಶ್ ಮಾರ್ಗದರ್ಶನ, ಪೊಲೀಸ್ ನಿರೀಕ್ಷಕ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಶ್ರೀನಿವಾಸಲು, ಸಿಬ್ಬಂದಿಗಳಾದ ಎಂ.ಕೆ. ಮಹೇಶ್, ಪ್ರಸನ್ನ, ನವೀನ್, ನಾಗರಾಜ್, ದಿಲೀಪ್ ಇತರರು ಇದ್ದರು.