ಸಿದ್ದಾಪುರ, ಆ. ೨೪: ಕರಡಿ ಗೋಡು ಅವರೆಗುಂದದ ಚಿಕ್ಕನಳ್ಳಿ ಭಾಗದಲ್ಲಿ ದುರಸ್ತಿಯಾಗಿರುವ ಕಂದಕ ಗಳನ್ನು ಹಾಗೂ ಸೋಲಾರ್ ಬೇಲಿ ಯನ್ನು ಅರಣ್ಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದರು. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅರಣ್ಯದಂಚಿನ ಅವರೆಗುಂದ ಭಾಗ ದಲ್ಲಿ ಕಾಡಾನೆಗಳು ಕಾಫಿ ತೋಟಗ ಳಿಗೆ ಲಗ್ಗೆ ಇಡದಂತೆ ಕಂದಕಗಳನ್ನು ಈ ಹಿಂದೆ ನಿರ್ಮಾಣ ಮಾಡಲಾ ಗಿತ್ತು. ಆದರೆ, ಇತ್ತೀಚೆಗೆ ಕಂದಕಗಳ ಬಳಿ ಮಣ್ಣು ಕುಸಿದಿರುವುದರಿಂದ ಅರಣ್ಯದಿಂದ ಕಾಡಾನೆಗಳು ಕಂದಕಗ ಳನ್ನು ದಾಟಿ ಬರುತ್ತಿವೆ. ಈ ಹಿನ್ನೆಲೆ ಯಲ್ಲಿ ವೀರಾಜಪೇಟೆ ತಾಲೂಕು ಡಿ.ಎಫ್.ಓ. ಶರಣ ಬಸಪ್ಪ ಹಾಗೂ ವಲಯ ಅರಣ್ಯಾಧಿಕಾರಿ ಕೆ.ಪಿ. ದೇವಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂದಿನ ದಿನಗಳಲ್ಲಿ ಕಂದಕ ಗಳನ್ನು ದುರಸ್ತಿಪಡಿಸಲಾಗುವುದು ಹಾಗೂ ಕಾಂಕ್ರೀಟ್ ಬ್ಯಾರಿಕೇಡ್ ನಿರ್ಮಾಣ ಮಾಡಲು ಪ್ರಸ್ತಾವನೆ ಯನ್ನು ಸಲ್ಲಿಸಲಾಗಿದೆ ಎಂದ ಡಿ.ಎಫ್.ಓ. ಶರಣ ಬಸಪ್ಪ, ವೀರಾಜ ಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಉಪ ಟಳ ನೀಡುವ ೫೦ ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ನೀಡಿದಲ್ಲಿ ಕಾಡಾನೆಗಳನ್ನು ಗುರುತಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಇತ್ತೀಚೆಗೆ ಬಾಡಗ - ಬಾಣಂಗಾಲ ಗ್ರಾಮದ ಮಟ್ಟಂನಲ್ಲಿ ಮಹಿಳೆಯನ್ನು ಹತ್ಯೆ ಮಾಡಿದ ಸಲಗವನ್ನು ಸೆರೆಹಿಡಿಯಲು ಅನು ಮತಿ ನೀಡಲು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಅವರ ಬಳಿ ಪ್ರಸ್ತಾಪಿಸಿದ್ದು, ಸದ್ಯದಲ್ಲೇ ಅನುಮತಿ ಲಭಿಸುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಈಗಾಗಲೇ ಬಾಡಗ - ಬಾಣಂಗಾಲ ಗ್ರಾಮದ ಕಾಫಿ ತೋಟ ಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗ ಳನ್ನು ಸಮೀಪದ ಅರಣ್ಯದೊಳಗೆ ಅಟ್ಟಲಾಗುತ್ತದೆ. ಈ ಕಾರ್ಯಾಚರಣೆ ಯಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವೀರಾಜಪೇಟೆ ತಾಲೂಕಿನ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಚಲನ- ವಲನ ಕಂಡು ಹಿಡಿಯಲು ೨೦ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರ್ಕಾರಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಕಳುಹಿಸಲಾಗಿದೆ. ರೇಡಿಯೋ ಕಾಲರ್ಗಳನ್ನು ಅಳವಡಿ ಸಿದಲ್ಲಿ ಯಾವ ಪ್ರದೇಶಗಳಲ್ಲಿ ಕಾಡಾ ನೆಗಳು ಇರುವ ಸ್ಥಳಗಳ ಗುರುತುಗಳು ಪತ್ತೆಹಚ್ಚಲು ಅನುಕೂಲವಾಗುತ್ತದೆ. ಕಾಡಾನೆಗಳ ಹಾವಳಿಯನ್ನು ತಡೆಗ ಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ವಾರ್ಷಿಕ ಕ್ರಿಯಾಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಶರಣ ಬಸಪ್ಪ ತಿಳಿಸಿದ್ದಾರೆ.
ಅರೆಕಾಡಿನಲ್ಲಿ ಪತ್ತೆಯಾಗದ ಸಲಗ
ಕಳೆದ ೧೦ ದಿನಗಳ ಹಿಂದೆ ಕೃಷಿಕ ದೇವಪ್ಪ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಸಲಗವೊಂದನ್ನು ಸೆರೆಹಿಡಿ ಯಲು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅರಣ್ಯ ಇಲಾಖೆಗೆ ಆದೇಶ ನೀಡಿದ್ದರು. ಆದರೆ, ಸಲಗ ವನ್ನು ಸೆರೆಹಿಡಿಯುವ ನಿಟ್ಟಿನಲ್ಲಿ ಮಡಿಕೇರಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಳೆದ ೧೦ ದಿನಗಳಿಂದ ಅರೆಕಾಡು- ಹೊಸ್ಕೇರಿ ಭಾಗದ ಕಾಫಿ ತೋಟಗಳಲ್ಲಿ ಒಂಟಿ ಸಲಗ ಪತ್ತೆ ಆಗಿಲ್ಲ. ಆದರೂ, ನಿರಂತರವಾಗಿ ಸಲಗದ ಚಲನವಲನ ಕಂಡು ಹಿಡಿಯಲು ಅರಣ್ಯ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ. - ವಾಸು