ಮಡಿಕೇರಿ, ಆ. ೨೨: ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮೆಡಿಕಲ್ ಕಾಲೇಜು) ವಿದ್ಯಾರ್ಥಿ ನಿಲಯದ ಆವರಣದ ಮುಂಭಾಗ ಅಶ್ಲೀಲ ವರ್ತನೆ ತೋರಿ ಅನುಚಿತವಾಗಿ ವರ್ತಿಸಿದ ಪ್ರಕರಣ ಹಾಗೂ ಅಲ್ಲಿನ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಈ ಬಗ್ಗೆ ಎಸ್ಪಿ ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದಿನಾಂಕ ೧೮ರಂದು ಮಧ್ಯರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೋರ್ವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿನಿ ನಿಲಯದ ಮುಂಭಾಗ ಅಶ್ಲೀಲ ವರ್ತನೆ ತೋರಿ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ದೂರು ಸ್ವೀಕರಿಸಿದ್ದ ಪೊಲೀಸರು ಘಟನೆ ನಡೆದ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಳಿಕ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ನೆಲ್ಲಿಹುದಿಕೇರಿ ನಿವಾಸಿಯಾಗಿದ್ದು, ಮಡಿಕೇರಿಯಲ್ಲಿ ಆಟೋ ಚಾಲಕನಾಗಿದ್ದ ಸಿಜಿಲ್ (೨೫) ಬಂಧಿತ ಆರೋಪಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಈ ರೀತಿ ವರ್ತಿಸಿದ್ದ ಈತ ಮಡಿಕೇರಿಯಲ್ಲಿ ಬಸ್ಗಳಲ್ಲಿ ತಂಗುತ್ತಾ; ನಿತ್ಯ ಕರ್ಮಗಳಿಗೆ ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಾ ಆಟೋ ಚಾಲನೆಯಲ್ಲಿ ತೊಡಗಿಸಿ ಕೊಂಡಿದ್ದ ಈತನಿಗೆ ವಾಸಕ್ಕೆ ಯಾವುದೇ ಮನೆ ಇರಲಿಲ್ಲ ಎಂದು ರಾಮರಾಜನ್ ತಿಳಿಸಿದರು.
ಮೂವರ ಬಂಧನ
ಇದೇ ಪ್ರಕರಣಕ್ಕೆ ಸಂಬAಧಿಸಿ ದಂತೆ ಘಟನೆ ನಡೆದ ಮರುದಿನ ತಾ.೧೯ರಂದು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಅಶ್ಲೀಲ ವರ್ತನೆ ತೋರಿದ್ದ ಆರೋಪಿಯನ್ನು ಪತ್ತೆ ಹಚ್ಚುವ ಸಂಬAಧ ಸ್ಥಳೀಯ ಆಟೋ ರಿಕ್ಷಾ ಚಾಲಕರುಗಳನ್ನು ವಿಚಾರಿಸುತ್ತಿದ್ದ ಸಂದರ್ಭ ಸ್ಕೂಟರ್ವೊಂದರಲ್ಲಿ ಬಂದ ಮೂವರು ವ್ಯಕ್ತಿಗಳು ವಿದ್ಯಾರ್ಥಿ ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದು, ಈ ಸಂಬAಧ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ ಮಡಿಕೇರಿಯ ನಿವಾಸಿಗಳಾದ ಸಿ. ಮನು, ಎಸ್. ಪ್ರಶಾಂತ್, ಕಿರಣ್ ಎಂಬವರುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮನು (೨೭),
ಕಿರಣ್ (೨೮)
(ಮೊದಲ ಪುಟದಿಂದ) ಹಾಗೂ ಪ್ರಶಾಂತ್ (೨೭) ಇವರುಗಳನ್ನು ಬಂಧಿಸಲಾಗಿದ್ದು, ಈ ಮೂವರು ಆರೋಪಿಗಳು ಸಿಸಿ ಟಿವಿ ಅಳವಡಿಕೆ ದುರಸ್ತಿ ಕೆಲಸ ಮಾಡುತ್ತಿದ್ದರೆಂದು ಎಸ್ಪಿ ರಾಮರಾಜನ್ ಮಾಹಿತಿ ನೀಡಿದರು.
ಶಾಲಾ-ಕಾಲೇಜು ಹಾಗೂ ಹಾಸ್ಟೆಲ್ಗಳ ಸಮೀಪ ವಿದ್ಯಾರ್ಥಿಗಳಿಗೆ ತೊಂದರೆ ನೀಡುವುದು ಅಥವಾ ಅನುಚಿತವಾಗಿ ವರ್ತಿಸುವ ಘಟನೆಗಳು ಕಂಡುಬAದಲ್ಲಿ ೧೧೨ಗೆ ಕರೆ ಮಾಡುವ ಮೂಲಕ ಹಾಗೂ ಕೆಎಸ್ಪಿ ತಂತ್ರಾAಶದ ಮೂಲಕ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಎಸ್ಪಿ, ಅನಾಮಧೇಯ ಪತ್ರದ ಮುಖಾಂತರ ಮಾಹಿತಿ ನೀಡಿದರೂ ಅದನ್ನು ಪರಿಗಣಿಸಿ ಸ್ಪಂದಿಸುವುದಾಗಿ ಹೇಳಿದರು.
ಎಸ್ಪಿ ರಾಮರಾಜನ್, ಎಎಸ್ಪಿ ಕೆ.ಎಸ್. ಸುಂದರ್ರಾಜ್ ಮಾರ್ಗದರ್ಶನದಲ್ಲಿ ಮಡಿಕೇರಿ ಡಿವೈಎಸ್ಪಿ ಎಂ. ಜಗದೀಶ್, ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕ ಯು. ಉಮೇಶ್, ಗ್ರಾಮಾಂತರ ಠಾಣಾಧಿಕಾರಿ ಶ್ರೀನಿವಾಸಲು, ನಗರ ಠಾಣಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಗಳಾದ ಸಿಜಿಲ್, ಮನು, ಪ್ರಶಾಂತ್ ಹಾಗೂ ಕಿರಣ್ ಇವರುಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.