ಮಡಿಕೇರಿ, ಆ. ೨೨ : ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷ... ಈ ಎಲ್ಲಾ ಮಳೆ ನಕ್ಷತ್ರಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಪ್ರಸ್ತುತ ಆ. ೧೭ ರಿಂದ ಮಖಾ ಮಳೆ ನಕ್ಷತ್ರವಿದೆ. ಆದರೆ ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ವಾಡಿಕೆಯಂತೆ ಮುಂಗಾರು ಮಳೆ ಈ ಹಿಂದಿನ ವರ್ಷಗಳಂತೆ ಸುರಿಯದೆ ಜನರು ಭವಿಷ್ಯದ ಆಲೋಚನೆಯಿಂದಾಗಿ ಈಗಿನಿಂದಲೇ ಆತಂಕ ಪಡು ವಂತಾಗಿದೆ. ಪ್ರಸಕ್ತ ವರ್ಷ ಮುಂಗಾರು ಮಳೆಯ ಅವಧಿ ಆರಂಭದಿAದಲೂ ಕ್ಷೀಣ ಗೊಂಡAತಿದೆ. ಆರ್ದ್ರಾ ಬಳಿಕ ಪುನರ್ವಸು ಮಳೆ ಮಾತ್ರ ಒಂದೆರಡು ದಿನಗಳ ಕಾಲ ಬಿರುಸು ತೋರಿದ್ದನ್ನು ಹೊರತುಪಡಿಸಿದರೆ ಈ ಬಾರಿ ಕೊಡಗಿನ ನೈಜ ಮಳೆಗಾಲದ ಅರಿವೇ ಜನತೆಗಾದಂತಿಲ್ಲ. ಬಹು ನಿರೀಕ್ಷೆಯಿದ್ದ ಆಶ್ಲೇಷಾ ಮಳೆ ಕೂಡ ಈ ಬಾರಿ ಕೈಕೊಟ್ಟಿದೆ. ಕೃಷಿ ಪ್ರಧಾನ ಜಿಲ್ಲೆ ಯಾಗಿರುವ ಕೊಡಗಿನಲ್ಲಿ ಈ ಬಾರಿಯ ವಾತಾವರಣ ಬದಲಾವಣೆಯಿಂದಾಗಿ ಭತ್ತದ ಕೃಷಿಗೆ ಭಾರಿ ಸಮಸ್ಯೆಯಾಗಿದೆ. ಭತ್ತದ ಕೃಷಿ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಹಲವೆಡೆ ಸಸಿಮಡಿಗಳನ್ನು ರೈತರು ತಯಾರು ಮಾಡಿ ಕೊಂಡಿದ್ದರಾದರೂ ಅದನ್ನು ನಾಟಿ ಮಾಡಲು ಸಮಸ್ಯೆಯಾಗಿದೆ.

ನದಿ-ಕೆರೆಯಂತಹ ನೀರಿನ ಮೂಲ ಇರುವ ರೈತರು ಗದ್ದೆಗಳಿಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸಿಕೊಂಡು ಒಂದಷ್ಟು

(ಮೊದಲ ಪುಟದಿಂದ) ಪ್ರಯತ್ನ ಮುಂದುವರಿಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಇತರ ರೈತರು ಬವಣೆ ಪಡುವಂತಾಗಿದೆ. ಮೂರ್ನಾಡುವಿನ ಬಡುವಂಡ ಬೋಪಣ್ಣ ಅವರು ಕೆರೆಯಿಂದ ನೀರು ಹಾಯಿಸಿಕೊಂಡೇ ೧೦ ಎಕರೆಯಷ್ಟು ಭತ್ತದ ಕೃಷಿ ಮಾಡಿದ್ದು ಸಂಕಷ್ಟವನ್ನು ‘ಶಕ್ತಿ’ಯೊಂದಿಗೆ ಹಂಚಿಕೊAಡರು. ಈಗಿನ ವಾತಾವರಣದಿಂದಾಗಿ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಸಾಧ್ಯತೆಯಿದ್ದು ಜನರು ಆತಂಕ ಪಡುವಂತಾಗಿದೆ. ಕಳೆದ ಮೂರು ದಿನಗಳ ಹಿಂದೆ ಮಳೆಯ ಸನ್ನಿವೇಶ ಕಂಡಬAದು ತುಸು ಆಶಾಭಾವನೆ ಮೂಡಿಸಿದಂತಿತ್ತು. ಆದರೆ ಇದೀಗ ಮತ್ತೆ ಬಿಸಿಲಿನ ವಾತಾವರಣವೇ ಕಂಡುಬರುತ್ತಿದೆ. -ಶಶಿ